ಅಥಣಿ:ಕೊಕಟನೂರ ಗ್ರಾಮದಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಾಳಪ್ಪ ಬಡಿಗೇರ (24), ಮೂಲತಃ ಜಮಖಂಡಿ ತಾಲೂಕಿನ ತುಂಗಳ ಗ್ರಾಮದವ, ಕೆಲವು ವರ್ಷಗಳಿಂದ ತನ್ನ ಬಡ ಕುಟುಂಬದ ಜೀವನವನ್ನು ನಡೆಸುವ ಸಲುವಾಗಿ ತನ್ನ ಊರನ್ನು ಬಿಟ್ಟು ಕೊಕಟನೂರ ಗ್ರಾಮದಲ್ಲಿ ವಾಸವಾಗಿದ್ದ.
ಶನಿವಾರ ರಾತ್ರಿ ಊರಲ್ಲಿ ನಾಟಕ ಪ್ರದರ್ಶನವಾಗುತ್ತಿರುವ ಹಿನ್ನೆಲೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಹಾಕಿಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಅಥಣಿ ತಾಲ್ಲೂಕಿನ ಐಗಳಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
PublicNext
07/08/2022 07:32 pm