ತುಮಕೂರು: ಭಾರೀ ಮಳೆಯಿಂದ ತುಮಕೂರಿನ ಗೂಳೂರು ಕೆರೆ ಸಂಪೂರ್ಣ ಭರ್ತಿಯಾಗಿದ್ದು ತುಂಬಿ ಹರಿಯುತ್ತಿರೋ ಕೆರೆ ಕೋಡಿ ಬಿದ್ದಿದೆ. ಕೋಡಿ ಬಿದ್ದ ಕೆರೆಯಲ್ಲಿ ಯುವಕರು ಹುಚ್ಚಾಟ ಮೀತಿಮೀರಿದೆ. ಈ ಮಧ್ಯೆ ನೋಡು ನೋಡುತ್ತಲೇ ತಂದೆ-ಮಗ ನೀರಲ್ಲಿ ಕೊಚ್ಚಿ ಹೋಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇವಲ ವಿಡಿಯೋಗಾಗಿ ವ್ಯಕ್ತಿಯೊಬ್ಬ ತನ್ನ ಮಗನನ್ನೇ ಕೈ ಬಿಟ್ಟಿದ್ದಾರೆ. ಕೂಡಲೇ ಬಾಲಕ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು ಅವನನ್ನು ಹಿಡಿಯಲು ಹೋದ ತಂದೆಯೂ ಕೊಚ್ಚಿ ಹೋದರು. ಅದೃಷ್ಟವಶಾತ್ ಸ್ಥಳದಲ್ಲೇ ಇದ್ದ ಸ್ಥಳೀಯರು ಮತ್ತು ಸಾರ್ವಜನಿಕರು ಸೇರಿ ತಂದೆ-ಮಗನನ್ನು ರಕ್ಷಣೆ ಮಾಡಿದ್ದಾರೆ.
PublicNext
07/08/2022 12:16 pm