ವಾಷಿಂಗ್ಟನ್: ಪಂಜಾಬಿ ಮಹಿಳೆಯೊಬ್ಬರು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಗಂಡನ ಚಿತ್ರಹಿಂಸೆ ತಾಳಲಾರದೆ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದು, ಈ ಘಟನೆಯು ವ್ಯಾಪಕ ಚರ್ಚೆಗೊಳಗಾಗಿದೆ.
ಕೇವಲ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಗಂಡ ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ನೊಂದು, ಬೇಸತ್ತು, ಹತಾಷಳಾಗಿ 30 ವರ್ಷ ವಯಸ್ಸಿನ ಮಂದೀಪ್ ಕೌರ್ ತಮ್ಮ ಬದುಕನ್ನು ಆತ್ಮಹತ್ಯೆಯ ಮೂಲಕ ಕೊನೆಗಾಣಿಸಿಕೊಂಡಿದ್ದಾರೆ. 'ಮುಂದೊಂದು ನನ್ನ ಪತಿ ಅರ್ಥಮಾಡಿಕೊಂಡಾನು ಎಂಬ ನಿರೀಕ್ಷೆಯಲ್ಲಿ ಇಲ್ಲಿಯವರೆಗೆ ಅವನ ಹಿಂಸೆಯನ್ನು ಸಹಿಸಿಕೊಂಡೆ,’ ಅಂತ ಸಾಯುವ ಮೊದಲು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಮಂದೀಪ್ ಹೇಳಿದ್ದಾರೆ.
'ಕಳೆದ ಎಂಟು ವರ್ಷಗಳಿಂದ ಅವನಿಂದ ಏಟು ತಿನ್ನುತ್ತಿದ್ದೇನೆ, ಹಿಂಸೆ ಸಹಿಸಿಕೊಂಡಿದ್ದೇನೆ, ಇನ್ನು ನನ್ನ ಕೈಲಾಗದು’ ಎಂದು ವೇದನೆ ಮತ್ತು ಅಸಹಾಯಕಳಾಗಿ ರೋದಿಸುತ್ತಾ 4 ಮತ್ತು 2 ವರ್ಷ ಹೆಣ್ಣುಮಕ್ಕಳ ತಾಯಿಯಾಗಿದ್ದ ಮಂದೀಪ್ ವಿಡಿಯೋನಲ್ಲಿ ಹೇಳಿದ್ದಾರೆ.
ಪಂಜಾಬಿ ಭಾಷೆಯಲ್ಲಿ ಮಾತಾಡಿರುವ ಅವರು ತನ್ನ ಪತಿ ಮತ್ತಿ ಅತ್ತೆ-ಮಾವಂದಿರನ್ನು ದೂಷಿಸಿದ್ದು, ಅವರೇ ಆತ್ಮಹತ್ಯೆ ಮಾಡಿಕೊಂಡು ಸಾಯುವಂತೆ ಬಲವಂತ ಮಾಡಿದ್ದಾರೆ ಎಂದು ಹೇಳಿದ್ದಾರೆ. ‘ಡ್ಯಾಡಿ ನಾನು ಸಾಯುತ್ತಿದ್ದೇನೆ, ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ’ ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಉತ್ತರ ಪ್ರದೇಶದ ಬಿಜನೂರ್ ನವರಾಗಿದ್ದ ಮಂದೀಪ್ 2015ರಲ್ಲಿ ರಂಜೋಧ್ಬೀರ್ ಸಿಂಗ್ ಸಂಧುರನ್ನು ಮದುವೆಯಾಗಿ ಅಮೆರಿಕಗೆ ತೆರಳಿದರು. ಬಿಜನೂರ್ ನಲ್ಲಿರುವ ಅವರ ಕುಟುಂಬದ ಸಹ ಮಂದೀಪ್ ಅನುಭವಿಸುತ್ತಿದ್ದ ಹಿಂಸೆ ಒಂದು ದಿನ ಕೊನೆಗೊಂಡೀತು ಎಂಬ ನಿರೀಕ್ಷೆಯಲ್ಲಿದ್ದರಂತೆ. ಅವರ ದೇಹವನ್ನು ಭಾರತಕ್ಕೆ ತರಲು ಕುಟುಂಬವು ಸರ್ಕಾರದ ಮೊರೆಹೊಕ್ಕಿದೆ.
ಸಂಧು ತನ್ನ ಮೇಲೆ ಹಿಂಸಾಚಾರ ನಡೆಸುತ್ತಿದ್ದ ವಿಡಿಯೋಗಳನ್ನು ಮಂದೀಪ್ ಭಾರತದಲ್ಲಿರುವ ತನ್ನ ಗೆಳತಿಯರಿಗೆ ಫಾರ್ವರ್ಡ್ ಮಾಡಿದ್ದಾರೆ. ಒಂದು ವಿಡಿಯೋನಲ್ಲಿ ಅವರ ಪುಟಾಣಿ ಮಕ್ಕಳು ಹೆದರಿಕೆಯಿಂದ ಅಳುವುದು ಕಿರುಚುವುದು ಕೇಳಿಸುತ್ತದೆ. ಮತ್ತೊಂದು ವಿಡಿಯೋನಲ್ಲಿ ಅವರು ಪತಿಗೆ ಸವಾಲು ಹಾಕಿ ಪ್ರತ್ಯುತ್ತರ ನೀಡುವುದು ಕೇಳಿಸುತ್ತದೆ. ಆದರೆ ಅವನು ಆಕೆಗೆ ಹೊಡೆಯುವುದನ್ನು ಮುಂದುವರೆಸಿ ತಪ್ಪಾಯ್ತು, ಕ್ಷಮಿಸಿ ಅಂತ ಹೇಳುವರೆಗೆ ಹೊಡೆಯುತ್ತಾನೆ.
ವಿಡಿಯೋನಲ್ಲಿ ಅವರು ತನ್ನನ್ನು 5 ದಿನಗಳವರೆಗೆ ಬಂಧಿಯಾಗಿಸಿದ ಬಳಿಕ ತನ್ನ ತಂದೆ ಪ್ರತಿಕ್ರಿಯಿಸಿದ ಬಗ್ಗೆ ಹೇಳಿದ್ದಾರೆ. ‘ಅವನ ವಿರುದ್ಧ ನನ್ನ ತಂದೆ ಪೊಲೀಸ್ ಕೇಸ್ ದಾಖಲಿಸಿದರು. ಆದರೆ ಅವನು ನನ್ನಲ್ಲಿಗೆ ಬಂದು ತನ್ನನ್ನು ಕಾಪಾಡುವಂತೆ ಗೋಗರೆದ. ನಾನು ಅವನನ್ನು ಕ್ಷಮಿಸಿಬಿಟ್ಟೆ. ಅವನಿಗೆ ವಿವಾಹೇತರ ಸಂಬಂಧಗಳು ಇದ್ದವು, ಕೇಳಿದರೆ ಹಿಂಸೆ ನೀಡುವುದನ್ನು ಜಾಸ್ತಿ ಮಾಡುತ್ತಿದ್ದ ಅನ್ನುವ ಕಾರಣಕ್ಕೆ ನಾವು ಸುಮ್ಮನಿದ್ದೆವು,’ ಎಂದು ಮಂದೀಪ್ ಹೇಳಿದ್ದಾರೆ. ಅವರ ಪತಿಯ ವಿರುದ್ಧ ಅಮೆರಿಕದಲ್ಲಾಗಲೀ, ಭಾರತದಲ್ಲಾಗಲೀ ದೂರ ಮತ್ತು ಕೇಸು ದಾಖಲಾಗಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಸಿಖ್ ಸಮುದಾಯದ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಕೌಟುಂಬಿಕ ಹಿಂಸೆಗಳ ವಿರುದ್ಧ ಹೋರಾಡುವ ಕೌರ್ ಮೂವ್ಮೆಂಟ್ ಹೆಸರಿನ ಸಂಸ್ಥೆಯು ಮಂದೀಪ್ ಅವರ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಲವಾರು ಜನ ವಿಡಿಯೋದ ಕ್ಲಿಪ್ ಗಳನ್ನು ಟ್ವಿಟರ್ ಮತ್ತು ಫೇಸ್ ಬುಕ್ ನಲ್ಲೂ ಶೇರ್ ಮಾಡಿದ್ದಾರೆ. ಕುಟುಂಬ ಮತ್ತು ಸಾಮಾಜಿಕ ತಿರುಳಿನ ಬಗ್ಗೆ ಜನ ಪ್ರಶ್ನೆಯೆತ್ತಿದ್ದಾರೆ.
ಸಿಟ್ಟಿನ ಪ್ರತಿಕ್ರಿಯೆಗಳ ನಡುವೆ, ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಕೆಲ ಮೂಲಭೂತ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.
ನ್ಯೂಯಾರ್ಕ್‌ನ ರಿಚ್‌ಮಂಡ್ ಹಿಲ್‌ನಲ್ಲಿರುವ ಆಕೆಯ ಮನೆಯ ಹೊರಗೆ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನಾಕಾರರು ಘೇರಾಯಿಸಿದ್ದರು. ಪಂಜಾಬ್‌ನ ಕೆಲವು ಕಾರ್ಯಕರ್ತರು ಬಿಜ್ನೋರ್ ಗೆ ಹೋಗಿ ಆಕೆಯ ಕುಟುಂಬವನ್ನು ಭೇಟಿಯಾದರು. ಟ್ವಿಟರ್, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ, ಬೇರೆ ಬೇರೆ ದೇಶಗಳಲ್ಲಿ ವಾಸವಾಗಿರುವ ಸಿಖ್ ಮತ್ತು ಪಂಜಾಬಿ ಜನ, #JusticeForMandeep ಎಂಬ ಹ್ಯಾಶ್‌ಟ್ಯಾಗ್ ಬಳಸಿ ಪ್ರತಿಕ್ರಿಯಿಸುತ್ತಿದ್ದಾರೆ. ಸಮಾಜವು ಅವಳಿಗೆ ಸಹಾಯ ಮಾಡುವಲ್ಲಿ ವಿಫಲಗೊಂಡಿದೆ ಎಂದು ಅನೇಕ ಪೋಸ್ಟ್‌ಗಳು ಹೇಳಿವೆ.
PublicNext
07/08/2022 11:23 am