ಬಾಗಲಕೋಟೆ: ಮಗ ನಾಪತ್ತೆ ಎಂದು ತಾಯಿ ದೂರು ನೀಡಿದ್ದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣದಲ್ಲಿ ತಾಯಿಯೇ ಖಳನಾಯಕಿ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದ್ದು, ಅನೈತಿಕ ಸಂಬಂಧ ಮತ್ತು ಆಸ್ತಿ ವಿಚಾರಕ್ಕೆ ಕೊಲೆಯಾಗಿರುವ ಸಂಗತಿ ಬಯಲಾಗಿದೆ.
ವಸಂತ ಮಾಲಿಂಗಪ್ಪ ಕುರಬಳ್ಳಿ (24) ಕೊಲೆಯಾದ ಮಗ. ಈತ ಆರೋಪಿ ಕಮಲವ್ವಳ ದತ್ತು ಮಗ. ಗೋಣಿ ಚೀಲದಲ್ಲಿ ಶವ ಪತ್ತೆಯಾದ ಪ್ರಕರಣವನ್ನು ಬೆನ್ನತ್ತಿ ಹೋದಾಗ ಕಮಲವ್ವ ಕರಾಳ ಮುಖದ ಅನಾವರಣ ಆಗಿದೆ. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿ ಹಾಗೂ ಆಸ್ತಿ ಕೇಳಿದ್ದಕ್ಕೆ ಅಳಿಯಂದಿರು ಮತ್ತು ಪ್ರಿಯಕರನ ಜತೆ ಸೇರಿ ದತ್ತುಮಗನನ್ನೇ ಕಮಲವ್ವ ಕೊಲೆ ಮಾಡಿಸಿದ್ದಾಳೆ. ಕೊಲೆ ಮಾಡಿಸಿದ ಬಳಿಕ ತಾನೇ ಹೋಗಿ ಮಗ ನಾಪತ್ತೆ ಅಂತ ದೂರು ನೀಡಿದ್ದಳು.
ಈ ಘಟನೆ ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದಲ್ಲಿ ನಡೆದಿದೆ. ಜೂನ್ 19 ರಂದು ಬೆಳಗ್ಗೆ 4 ಗಂಟೆಗೆ ತಾಯಿ ಕಮಲವ್ವ, ಅಳಿಯಂದಿರಾದ ಭೀಮಪ್ಪ ಮಳಲಿ, ಸಿಂಧೂರ ಬೀರಣ್ಣವರ, ಕಮಲವ್ವಳ ಪ್ರಿಯಕರ ನಿಂಗಪ್ಪ ಸೇರಿಕೊಂಡು ವಸಂತ ಮಾಲಿಂಗಪ್ಪನ ಕತ್ತು, ಮರ್ಮಾಂಗ ಹಿಸುಕಿ ಕೊಲೆ ಮಾಡಿ, ಎದೆ ಮೇಲೆ ಕಲ್ಲು ಎತ್ತಿ ಹಾಕಿದ್ದರು. ಬಳಿಕ ಶವವನ್ನು ಚೀಲದಲ್ಲಿ ತುಂಬಿಕೊಂಡು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ದಾಸನಾಳ ಸೀಮೆಯ ಕಾಲುವೆಯಲ್ಲಿ ಬೀಸಾಡಿದ್ದರು. ಈ ಪ್ರದೇಶ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ.
PublicNext
06/08/2022 04:30 pm