ಬ್ಯಾಂಕಾಕ್: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನ ಆಗ್ನೇಯ ಭಾಗದಲ್ಲಿರುವ ಚೋನ್‌ಬುರಿ ಪ್ರಾಂತ್ಯದ ನೈಟ್‌ಕ್ಲಬ್‌ನಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು 13 ಜನರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿದ್ದಾರೆ.
ಬಂಕೋಟ್ನ ಚೊನ್ಬುರಿಯಲ್ಲಿ ದುರಂತ ಸಂಭವಿಸಿದೆ. ಮೌಂಟೇನ್ ಬಿ ನೈಟ್ ಕ್ಲಬ್ನಲ್ಲಿ ಅನಾಹುತ ಸಂಭವಿಸಿದೆ. ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಮೃತರೆಲ್ಲಾ ಥೈಲ್ಯಾಂಡ್ನವರು ಎಂದು ವರದಿಯಾಗಿದೆ. ದುರ್ಘಟನೆಯಲ್ಲಿ ಗಾಯಗೊಂಡಿರುವವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
PublicNext
05/08/2022 11:22 am