ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ವೃದ್ಧಾಪ್ಯ ವೇತನ ಕೊಡಿಸೋದಾಗಿ ನಂಬಿಸಿ ವೃದ್ದೆಯ 40 ಗ್ರಾಂ ಚಿನ್ನದ ಸರ ಎಗರಿಸಿದ ಕಳ್ಳ!

ಪಾವಗಡ: ವೃದ್ಯಾಪವೇತನ ಕೊಡಿಸುವುದಾಗಿ ವೃದ್ದೆಯನ್ನು ನಂಬಿಸಿ 40 ಗ್ರಾಂ ಅಂದಾಜು 2 ಲಕ್ಷ್ಮ ಮೌಲ್ಯದ ಚಿನ್ನದ ಸರವನ್ನು ಖರ್ತನಾಕ್ ಕಳ್ಳ ಹಾಡುಹಗಲೇ ಅಪಹರಿಸಿದ್ದಾನೆ. ಈ ಘಟನೆ ಪಾವಗಡ ಪೋಲಿಸ್ ಠಾಣಾ ಪಕ್ಕದಲ್ಲಿರುವ ತಹಶೀಲ್ದಾರ್ ಕಚೇರಿ ಬಳಿ ಗುರುವಾರ ಮಧ್ಯಾಹ್ನ ನಡೆದಿದೆ.

ಪಾವಗಡ ಪಟ್ಟಣದ ಗಾಂಧಿನಗರದ ನಿವಾಸಿ ರಾಮ ಲಕ್ಷ್ಮಮ್ಮ 70 ವರ್ಷ ಚಿನ್ನದ ಸರವನ್ನು ಕಳೆದುಕೊಂಡ ವೃದ್ದೆಯಾಗಿದ್ದಾರೆ.

ರಾಮಲಕ್ಷ್ಮಮ್ಮ ಗುರುವಾರ ಪಟ್ಟಣದ ಬಳ್ಳಾರಿ ರಸ್ತೆಯ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿರಬೇಕಾದರೆ, ಯುವಕನೊಬ್ಬ ನಾನು ಪಟ್ಟಣದ ಬ್ರಾಹಣ ಬೀದಿಯಲ್ಲಿ ವಾಸ ಇರುವ ಮಹೇಂದ್ರ ಎಂಬುದಾಗಿ ಪರಿಚಯ ಮಾಡಿಕೊಂಡು ನಿಮಗೆ ವೃದ್ದಾಪ್ಯ ವೇತನ ಮೂಂಜುರಾಗಿದೆ. ಆದೇಶ ಪತ್ರವನ್ನು ಕೊಡಿಸುವುದಾಗಿ ತಿಳಿಸಿ, ಮೊದಲಿಗೆ ಬಳ್ಳಾರಿ ರಸ್ತೆಯ ಮಾರ್ಗದಲ್ಲಿರುವ ತೋಟಗಾರಿಕಾ ಇಲಾಖೆಯ ಬಳಿ ಕರೆದುಕೊಂಡು ಹೋಗಿ ಅಲ್ಲಿ - ವೃದ್ಧೆಯ ಚಿನ್ನದ ಸರ ಇದ್ದರೆ ವೃದ್ಧಾಪ್ಯ ವೇತನ ಕೊಡುವುದಿಲ್ಲಾ ಎಂದು ಸರವನ್ನು ಬಿಚ್ಚಿಸಿ ಬ್ಯಾಗ್ ಒಳಗೆ ಹಾಕಲು ಸೂಚಿಸಿದ್ದಾನೆ. ಅಲ್ಲಿಂದ ತಹಶೀಲ್ದಾರ್ ಕಚೇರಿಯ ಒಂದನೇ ಮಹಡಿಗೆ ಕರೆತಂದು ಕಚೇರಿಯಲ್ಲಿ ಕುಳ್ಳರಿಸಿ, ಸರವನ್ನು ನೋಡಿಕೊಡುತ್ತೇನೆ ಎಂದು ಸರ ಪಡೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ, ಅಜ್ಜಿ ಹಿಂಬಾಲಿಸಿದರೂ ಅಷ್ಟರಲ್ಲಾಗಲೇ ಯುವಕ ಪರಾರಿಯಾಗಿದ್ದಾನೆ. ತಕ್ಷಣ ಪೋಲಿಸ್ ಠಾಣೆಗೆ ತೆರಳಿ ಅಜ್ಜಿ ಪೋಲಿಸರಿಗೆ ಮಾಹಿತಿ ನೀಡಿದ್ದು, ಪೋಲೀಸರು ತಹಶೀಲ್ದಾರ್ ಕಚೇರಿಯಲ್ಲಿನ ಸಿ.ಸಿ. ಕ್ಯಾಮೆರಾದಲ್ಲಿ ಆಗುಂತಕನ ಚಲನವಲನ ಬಗ್ಗೆ ಪರೀಶಿಲನೆ ನಡೆಸಿದ್ದಾರೆ.

ಅಜ್ಜಿ ಮನೆಯಲ್ಲಿ ಒಂಟಿಯಾಗಿದ್ದು, ಇಂತಹ ವಯೋವೃದ್ಧರನ್ನು ಟಾರ್ಗೆಟ್ ಮಾಡಿಕೊಂಡು ಚಿನ್ನದ ಸರ ದೋಚುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆ ಪಟ್ಟಣದ ಬಳಿ ಹಾಡಹಗಲೇ ಒಂಟಿಯಾಗಿ ವಾಸವಿದ್ದ ವೃದ್ದೆಯ ಮೇಲೆ ದಾಳಿ ನಡೆಸಿ ಚಿನ್ನದ ಸರವನ್ನು ಅಪಹರಿಸಲಾಗಿತ್ತು. ಇನ್ನಾದರೂ ಪೊಲೀಸರು ಈ ತಂಡವನ್ನು ಅತಿ ಹೆಚ್ಚು ಮುಂದೆ ಆಗಬಹುದಾದ ಹೆಚ್ಚಿನ ಅನಾಹುತವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

Edited By : Nagaraj Tulugeri
PublicNext

PublicNext

04/08/2022 07:53 pm

Cinque Terre

24.23 K

Cinque Terre

0