ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ : ಸಿದ್ದರಾಮೋತ್ಸವಕ್ಕೆ ಹೊರಟ ಬಸ್ ಅಪ್ಪಳಿಸಿ ಓರ್ವ ಸಾವು, ಆರು ಜನರಿಗೆ ಗಂಭೀರ ಗಾಯ

ಶಿವಮೊಗ್ಗ : ದಾವಣಗೆರೆ ಸಿದ್ದರಾಮೋತ್ಸವಕ್ಕೆ ತೆರಳುತ್ತಿದ್ದ ಬಸ್ ಹಾಗೂ ಕಾರ್ ಮಧ್ಯ ಉಂಟಾದ ಭೀಕರ ಡಿಕ್ಕಿಯಲ್ಲಿ ಓರ್ವ ಮೃತಪಟ್ಟು ಆರು ಜನ ಘಾಯಗೊಂಡ ಘಟನೆ ಇಂದು ಸಾಗರ ತಾಲೂಕಿನಲ್ಲಿ ಸಂಭವಿಸಿದೆ.

ಕಾರಿನಲ್ಲಿದ್ದ ಶಾಬಾಜ್ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು,ಇನ್ನುಳಿದ ಆರು ಜನ ತೀವ್ರ ಗಾಯಗೊಂಡಿದ್ದಾರೆ. ದಾವಣಗೆರೆ ಸಿದ್ದರಾಮೋತ್ಸವಕ್ಕೆ ತೆರಳುವ ಮುನ್ನ ೨೫ ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಜೋಗ ಜಲಪಾತ ವೀಕ್ಷಿಸಿ ಮರಳಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಗಾಯಗೊಂಡವರನ್ನು ಮಹಮ್ಮದ್ ಉಸ್ಮಾನ್,ಶಿಫಾ, ರಿಯಾನ್, ಖಮರುನ್ನಿಸಾ ಹಾಗೂ ಜಬ್ರನ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಚಾಲಕನ ದೇಹ ಪತ್ತೆಯಾಗದಷ್ಟು ಛಿದ್ರ ಛಿದ್ರವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Edited By :
PublicNext

PublicNext

02/08/2022 04:17 pm

Cinque Terre

24.94 K

Cinque Terre

8

ಸಂಬಂಧಿತ ಸುದ್ದಿ