ಕೋಲಾರ: ಕ್ಷುಲ್ಲಕ ಕಾರಣಕ್ಕೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಕನ್ನಂಪಲ್ಲಿ ಹಾಗೂ ಕಾರಂಗಿ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿದೆ.ರಸ್ತೆಗೆ ಅಡ್ಡಲಾಗಿ ನಿಂತಿದ್ದ ಕಾರನ್ನು ತೆಗೆಯುವ ವಿಚಾರಕ್ಕೆ ಆರಂಭವಾದ ಗಲಾಟೆ ವಿಕೋಪಕ್ಕೆ ಹೋಗಿ ಕಾರಂಗಿ ಗ್ರಾಮಸ್ಥರು ಕನ್ನಂಪಲ್ಲಿ ಗ್ರಾಮಕ್ಕೆ ತೆರಳಿ ಜೆಸಿಬಿ ಮಾಲೀಕ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.
ಘಟನೆಯಲ್ಲಿ ಜೆಸಿಬಿ ಹಾಗೂ ಮನೆಯ ಮೇಲೆ ಕಲ್ಲು ತೂರಾಟವಾಗಿದ್ದು,ಜೆಸಿಬಿ ಗಾಜುಗಳು ಪುಡಿ ಪುಡಿಯಾಗಿದೆ.20 ಕ್ಕೂ ಹೆಚ್ಚು ಜನರು ಗಾಯಗೊಂಡು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ರವಿ ಕುಮಾರ್, ಕೋಲಾರ.
PublicNext
31/07/2022 07:03 pm