ನವದೆಹಲಿ: ತಿನ್ನಲು ಚಪಾತಿ ಕೊಡದೇ ಇರೋದಕ್ಕೆ ರಿಕ್ಷಾ ಚಾಲಕನನ್ನ ಯುವಕ ಕೊಂದಿರೋ ಘಟನೆ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.
ಮೃತನನ್ನ ಮುನ್ನಾ (40) ಎಂದು ಗುರುತಿಸಲಾಗಿದೆ. ರಿಕ್ಷಾ ಚಾಲಕ ಮುನ್ನಾ, ಊಟ ತಂದು ರಸ್ತೆ ಪಕ್ಕ ಕುಳಿತು ಊಟ ಮಾಡುತ್ತಿದ್ದು. ಅದೇ ವೇಳೆಗೆ ಮಧ್ಯಪಾನ ಮಾಡಿದ್ದ ಫಿರೋಜ್ ಖಾನ್ ಎಂಬಾತ ಈತನ ಬಳಿ ಬಂದು ಚಪಾತಿ ಕೇಳಿದ್ದಾರೆ.
ಆಗ ಮುನ್ನಾ ಒಂದು ಚಪಾತಿ ಕೊಟ್ಟಿದ್ದಾನೆ. ಇನ್ನೊಂದು ಚಪಾತಿ ಕೇಳಿದ್ದಾನೆ. ಆಗ ಮುನ್ನಾ ಕೊಡಲು ನಿರಾಕರಿಸಿದ್ದಾನೆ. ಅದಕ್ಕೇನೆ ಫಿರೋಜ್ ಖಾನ್,ಮುನ್ನಾಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಆ ಕೂಡಲೆ ಸ್ಥಳಕ್ಕೆ ಬಂದ ಕರೋಲ್ ಬಾಗ್ ಪೊಲೀಸರು ಫಿರೋಜ್ ಖಾನ್‌ನನ್ನ ಬಂಧಿಸಿದ್ದಾರೆ.
PublicNext
30/07/2022 07:48 am