ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಜಮೀನು ಗಲಾಟೆ ಪರಿಹಾರದ ಹಣದ ಬಗ್ಗೆ ಅನುಮಾನಗೊಂಡ ರೈತ ನೇಣಿಗೆ ಶರಣು..!

ಚಿಕ್ಕನಾಯಕನಹಳ್ಳಿ:- ನಮ್ಮ ಜಮೀನಿನ ರಸ್ತೆ ನಿರ್ಮಾಣವಾಗುತ್ತಿದೆ ಎಂದು ವಿರೋಧಿಸಿ ಮಂಗಳವಾರ ತಮ್ಮ ಜಮೀನಿನಲ್ಲಿ ರಸ್ತೆ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿದ್ದ ರೈತ ಗುರುವಾರ ನೇಣಿಗೆ ಶರಣಾಗಿರುವ ಘಟನೆ ಚಿಕ್ಕನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಂದಿಕೆರೆ ತಾಲೂಕಿನ ಕಂದಿಕೆರೆ ಹೋಬಳಿಯ ಸಾಲ್ಕಟ್ಟೆ ಗೇಟ್ ಸಮೀಪ 150ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ತಮ್ಮ ಜಮೀನನ್ನು ಬಳಸಿಕೊಂಡಿದ್ದು ಅದಕ್ಕೆ ಪರಿಹಾರಕ್ಕೆ ಒತ್ತಾಯಿಸಿದ್ದ ರೈತ ರಂಗಯ್ಯ ನಂತರ ಸ್ಥಳಕ್ಕೆ ತಹಶೀಲ್ದಾರ್ ಮತ್ತು ಪೋಲೀಸರ ಸಂದಾನದ ಮೂಲಕ ಪರಿಹಾರದ ಸಮಸ್ಯೆ ಬಗೆಹರಿಸಲಾಗಿತ್ತು ಅದರೆ ತನಗೆ ಬರಬೇಕಾದ ಪರಿಹಾರದ ಹಣ ಬರುವುದರ ಬಗ್ಗೆ ಅನುಮಾನಗೊಂಡ ರೈತ ಗುರುವಾರ ಬೆಳಗಿನ ಜಾವ ತಮ್ಮ ಜಮೀನಿನಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ.

ಮೃತ ರೈತ ರಂಗಯ್ಯ(65) ಸಾಲ್ಕಟ್ಟೆ ಪಾಳ್ಯದ ನಿವಾಸಿಯಾಗಿದ್ದು ಮೂರು ಜನ ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗನಿದ್ದು ಪತ್ನಿ ಇತ್ತೀಚಿಗೆ ಮೃತಪಟ್ಟಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಸಿಪಿಐ ನಿರ್ಮಲ ಸೇರಿದಂತೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಪ್ರಕರಣ ತಾಲೂಕಿನಾದ್ಯಂತ ಸಂಚಲನ ಮೂಡಿಸಿದ್ದು ರೈತನ ಸಾವಿಗೆ ಹಲವುಆಯಾಮಗಳನ್ನು ಸೃಷ್ಟಿ ಮಾಡಿದೆ.

Edited By : Nagaraj Tulugeri
PublicNext

PublicNext

28/07/2022 04:09 pm

Cinque Terre

29.71 K

Cinque Terre

0

ಸಂಬಂಧಿತ ಸುದ್ದಿ