ಕೋಲ್ಕತ್ತಾ : ನೋಡಿ ಇವರ ದುಡ್ಡಿನ ಹಪಾಹಪಿ, ಈಕೆಯ ಫ್ಲ್ಯಾಟ್ ದಲ್ಲಿ ತುಂಬಿದ್ದ ನೋಟುಗಳ ಸಾಗಿಸಲು ಲಾರಿ ಬಳಸಬೇಕಾಯಿತು. ಈಕೆ ಯಾರು ಬೇರೆ ಯಾರೂ ಅಲ್ಲ, ಪಶ್ಚಿಮ ಬಂಗಾಳದ ಸಿ.ಎಂ ಮಮತಾ ಬ್ಯಾನರ್ಜಿ ಸರಕಾರದಲ್ಲಿ ಮಂತ್ರಿಯಾಗಿದ್ದ ಪಾರ್ಥ್ ಚಟರ್ಜಿ ಎಂಬಾತನ ಆಪ್ತೆ , ನಟಿ ಅರ್ಪಿತಾ ಚಟರ್ಜಿ.
ಶಿಕ್ಷಕರ ನೇಮಕಾತಿ ಹಗರಣ ಕುರಿತಂತೆ ಕೋಲ್ಕತ್ತಾ ಹೈಕೋರ್ಟ್ ತನಿಖೆ ನಡೆಸುವಂತೆ ಜಾರಿನಿರ್ದೇಶನಾಲಯ ಹಾಗೂ ಸಿಬಿಐಗೆ ಆದೇಶಿಸಿದ ನಂತರ ಟಿಎಂಸಿ ನಾಯಕ ಪಾರ್ಥ್ ಚಟರ್ಜಿ ಹಾಗೂ ಈಕೆ ಸೇರಿ ಎಂಬಾಕೆ ಫ್ಲ್ಯಾಟ್ ಮೇಲೆ ದಾಳಿ ನಡೆಸಲಾಗಿತ್ತು. ಅಲ್ಲಿಯ ವಾರ್ಡರೋಬ್ ದಲ್ಲಿ ಡಂಪ್ ಮಾಡಲಾಗಿದ್ದ ಒಟ್ಟು ಬರೋಬ್ಬರಿ ೪೦ ಕೋಟಿ , ಭಾರಿ ಪ್ರಮಾಣದಲ್ಲಿ ಬಂಗಾರದ ಆಭರಣ ಹಾಗೂ ೧೦ ನೋಟು ಕೌಂಟಿಂಗ್ ಮಷಿನ್ ಇಡಿ ಅಧಿಕಾರಿಗಳು ಎತ್ತಾಕಿಕೊಂಡು ಹೋಗಿದ್ದಾರೆ.
ಈ ಕಳ್ಳ ಮಂತ್ರಿ ಪಾರ್ಥ್ ಚಟರ್ಜಿ ಕೋಲ್ಕತ್ತಾದಲ್ಲಿ ಹತ್ತಾರು ಫ್ಲ್ಯಾಟ್ ಖರೀದಿಸಿ ಅಕ್ರಮ ಹಣ ಸ್ಟಾಕ್ ಮಾಡಲು ಅನೇಕರಿಗೆ ಉಡುಗೊರೆಯಾಗಿ ನೀಡಿದ್ದನಂತೆ. ಅದಲ್ಲಿ ನಟಿ ಅರ್ಪಿತಾ ಚಟರ್ಜಿಯದೂ ಒಂದು. ಬಗೆದಷ್ಟೂ ಭ್ರಷ್ಟಾಚಾರದ ಹಗರಣ ಹೊರಬೀಳುತ್ತಿದೆ. ಇನ್ನೂ ಕೆಲವು ಕಟ್ಟಡಗಳಲ್ಲಿ ನೂರಾರು ಕೋಟಿ ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಅಧಿಕಾರಿಗಳಿಗೆ ಲಭ್ಯವಾಗಿದೆ.
PublicNext
28/07/2022 10:31 am