ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುರುವೇಕೆರೆ: ಆರ್.ಟಿ.ಐ.ಕಾರ್ಯಕರ್ತ ಕಿರಣ್ ಸಾವಿನ ಸುತ್ತ ಅನುಮಾನಗಳ ಹುತ್ತ

ತುರುವೇಕೆರೆ:ಸಮಾದಿಯಾದ ಒಂದುವರೆ ತಿಂಗಳ ಬಳಿಕ ಮೃತ ದೇಹ ಹೊರ ತೆಗದ ಪೋಲೀಸ್ ಇಲಾಖೆ. ಮೇ ತಿಂಗಳ 13ರ ರಾತ್ರಿ ಅನುಮಾನಾಸ್ಪದ ವಾಗಿ ಸಾವನ್ನಪ್ಪಿದ್ದ ಕಿರಣ್ ಕುಮಾರ್ ತನ್ನ ಮನೆಯ ಬಾತ್ ರೋಮಿನಲ್ಲಿ ಅನುಮಾನಾಸ್ಪದವಾಗಿ ಮೃತ ಪಟ್ಟಿದ್ದರು.

ತಾಲ್ಲೂಕಿನ ದಂಡಿನ ಶಿವರ ಹೋಬಳಿಯ ಬೀಚನಹಳ್ಳಿ ಗ್ರಾಮದ ಕಿರಣ್ (54) ತನ್ನ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಸಂಬಂಧಿಕರು ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ತೀರ್ಮಾನಿಸಿ ಯಾವುದೇ ಮರಣೋತ್ರ ಪರೀಕ್ಷೆಗೆ ಒಳಪಡಿಸದೆ ಅಂತ್ಯಸಂಸ್ಕಾರ ನೆರವೇರಿಸಿದ್ದರು.

ಇದಾದ ಕೆಲ ದಿನಗಳ ನಂತರ ಸಾವಿನ ಸಂಶಯ ಚಿಕ್ಕಪ್ಪನ ಮಗನಾದ ವೈಭವ್ ಗೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಯಾದ ದಂಡಿನ ಶಿವರದದಲ್ಲಿ ದೂರು ದಾಖಲಿಸಿದ್ದರು.

ದೂರನ್ನು ಪರಿಗಣಿಸಿದ ದಂಡಿನಶಿವರ ಪೊಲೀಸ್ ಸಿಬ್ಬಂದಿ ತಿಪಟೂರು ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದ ನಂತರ ಸ್ಥಳೀಯ ಪೊಲೀಸ್ ಸಿಬ್ಬಂದಿ ಸಮಾಧಿಯನ್ನು ಹತ್ತಾರು ದಿನಗಳ ವರೆಗೆ ಕಾದು ಅಂತಿಮವಾಗಿ ಮಂಗಳವಾರ ಸಂಜೆ ಉಪವಿಭಾಗಾಧಿಕಾರಿ ಸಿ.ಆರ್.ಕಲ್ಪಶ್ರೀ ನೇತೃತ್ವದಲ್ಲಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಅವಶ್ಯಕವಾದ ಅಂಗಾಂಗಗಳನ್ನು ಪ್ಲೊರೆನ್ಸಿ ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಯಿತು.

ಒಟ್ಟಾರೆ ಆ.ಟಿ.ಐ.ಕಾರ್ಯಕರ್ತ ಹಾಗೂ ಹೋರಾಟಗಾರ ಎನ್ನುವ ಆಯಾಮ ಒಂದಡೆ ಯಾದರೆ ತಮ್ಮ ಸಂಬಂಧಿಗಳಿಂದಲೇ ದೂರವಿದ್ದ ಈತ ಒಬ್ಬನೇ ವಾಸಿಸುತ್ತಿದ್ದು ಆ ಮನೆಗೆ ಸಿ.ಸಿ.ಟಿವಿ ಅಳವಡಿಸಿಕೊಂಡಿದ್ದರು ಊರೊಳಗಿರುವ ಮನೆಯಲ್ಲಿಯೇ ಈ ಘಟನೆ ನಡದಿರುವುದಕ್ಕೆ ಇದರಲ್ಲಿ ಸಂಬಂಧಿಗಳ ಕೈವಾಡವೋ ಅಥವಾ ಮತ್ಯಾವ ದ್ವೇಷ ಹೋರಾಟದ ಫಲವೋ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

Edited By : Nirmala Aralikatti
PublicNext

PublicNext

27/07/2022 02:53 pm

Cinque Terre

34.34 K

Cinque Terre

0

ಸಂಬಂಧಿತ ಸುದ್ದಿ