ಮಧುಗಿರಿ: ವಿಲ್ ಕಾರ್ಟ್ ಸೆಲೋಷನ್ ಪ್ರವೇಟ್ ಕಂಪನಿಯ ದಾಸ್ತಾನಿನ ಬೀಗ ಹೊಡೆದು 2.80 ಲಕ್ಷ ನಗದು ಹಾಗೂ 3.40 ಲಕ್ಷ ಮೌಲ್ಯದ ದಿನಸಿ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿರುವ ಘಟನೆ ಸೋಮವಾರ ಬೆಳಿಗ್ಗೆ ಪಟ್ಟಣದ ಗೌರಿಬಿದನೂರು ರಸ್ತೆಯಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಶನಿವಾರ ರಾತ್ರಿ ಎಂದಿನಂತೆ ಕೆಲಸ ಮುಗಿಸಿಕೊಂಡು ಕಳೆದ ಎರಡು ದಿನಗಳಿಂದ ಬಂದಿದ್ದ 2.80 ಲಕ್ಷ ಹಣವನ್ನು ಗೋಡನ್ ಬೀರುವಿನಲ್ಲಿಟ್ಟು ಬೀಗ ಹಾಕಿ ಹಾಗೂ ಗೋಡನ್ ಗೂ ಬೀಗ ಹಾಕಿಕೊಂಡು ಮ್ಯಾನೇಜರ್ ಮನೆಗೆ ಹೋಗಿದ್ದರು.
ಆದರೆ ಭಾನುವಾರ ಬೆಳಿಗ್ಗೆ ಗೋಡನ್ ಬೀಗ ತೆಗೆಯಲು ಬಂದಿದ್ದಾಗ, ಬೀಗ ಹೊಡೆದು ಬೀರುವಿನ ಲ್ಲಿದ್ದ 2.80 ಲಕ್ಷ ಹಣ ಹಾಗೂ 3.40 ಮೌಲ್ಯದ ದಿನಸಿ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿಕೊಂಡು ಪರಾರಿಯಾಗಿ ದ್ದಾರೆಂದು ಮ್ಯಾನೇಜರ್ ಕೆ.ವಿ.ಶ್ರೀನಿವಾಸ್ ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಮಧುಗಿರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
26/07/2022 09:03 am