ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕೃಷ್ಣ ಮೃಗ ಚರ್ಮ ಮಾರಾಟದ ಬೃಹತ್ ಜಾಲ ಭೇದಿಸಿದ ಬೆಳಗಾವಿ ಅರಣ್ಯ ಸಂಚಾರಿದಳ

ಬೆಳಗಾವಿ:ಬೆಳಗಾವಿ ಅರಣ್ಯ ಸಂಚಾರಿ (ಜಾಗೃತ) ದಳದ ತಂಡ ಕೃಷ್ಣ ಮೃಗ ಚರ್ಮ ಮಾರಾಟ ಮಾಡುವ ಬೃಹತ್ ಜಾಲವನ್ನು ಬೇಧಿಸಿದೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಜ್ಜರಿ, ದೇವರಗುಡ್ಡ, ರಾಣೇಬೆನ್ನೂರಿನ ಮೂರು ವ್ಯಕ್ತಿಗಳನ್ನು ಮತ್ತು ಬ್ಯಾಡಗಿ ತಾಲ್ಲೂಕಿನ ಬುಡಪ್ಪನಹಳ್ಳಿ ಗ್ರಾಮದ ಒಬ್ಬ ವ್ಯಕ್ತಿ ಮತ್ತು ಹಾವೇರಿ ತಾಲ್ಲೂಕಿನ ಬರಡಿ ಗ್ರಾಮದ ಒಬ್ಬ ವ್ಯಕ್ತಿ ಸೇರಿ ಒಟ್ಟು 05 ಜನರನ್ನು ಯಶಸ್ವಿಯಾಗಿ ಬಂಧಿಸಿ , ಅವರಿಂದ 03 ಕೃಷ್ಣ ಮೃಗದ ಚರ್ಮಗಳನ್ನು , ವನ್ಯ ಪ್ರಾಣಿಗಳನ್ನು ಬೇಟೆಯಾಡಲು ಬಳಸುವ 04 ತಂತಿಯ ಉರುಳುಗಳನ್ನು ಮತ್ತು 01 ದ್ವಿಚಕ್ರ ವಾಹನ ಸಮೇತ ರಾಣೇಬೆನ್ನೂರಲ್ಲಿ ವಶಪಡಿಸಿಕೊಳ್ಳಲಾಗಿದೆ.

ಬಂಧಿತರು ಕೃಷ್ಣ ಮೃಗ ಚರ್ಮಗಳನ್ನು 15 ಲಕ್ಷ ಹಣದ ವ್ಯವಹಾರ ಮಾಡುವ ಸಮಯದಲ್ಲಿ , ಜಾಗೃತ ದಳದ ಮುಖ್ಯಸ್ಥರಾದ ಶ್ರೀಮತಿ ಸೀಮಾ ಗರ್ಗ್ ( ಭಾಅಸೇ ) , ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ( ಜಾಗೃತ ) , ಬೆಂಗಳೂರು ಹಾಗೂ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಚೌವ್ಹಾನ ಹಾಗೂ ಶಂಕರ ಕೆ . ಕಲ್ಲೋಳಿಕರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು , ಅರಣ್ಯ ಸಂಚಾರಿದಳ ( ಜಾ ) , ಬೆಳಗಾವಿ ರವರ ನಿರ್ದೇಶನದಂತೆ ಬೆಳಗಾವಿಯ ಜಾಗೃತ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಿ. ತೇಲಿ ಮತ್ತು ವಿ.ಡಿ . ಹುದ್ದಾರ ಅವರ ನೇತೃತ್ವದಲ್ಲಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ಪಟ್ಟಣದಲ್ಲಿ 03 ಕೃಷ್ಣ ಮೃಗ ಚರ್ಮಗಳನ್ನು ವಜ್ಯ ಜೀವಿ ಸಂರಕ್ಷಣೆ ಕಾಯ್ದೆ 1972 ರ ಶೇಡ್ಯೂಲ್ 1 ರ ಈ ಅಪರಾಧಕ್ಕೆ ಸಂಬಂಧಿಸಿದಂತ ಮಾಲು ಸಮೇತ ವನ್ಯ ಪ್ರಾಣಿಗಳನ್ನು ಬೇಟೆಯಾಡಲು ಬಳಸುವ 04 ತಂತಿಯ ಉರುಳುಗಳನ್ನು , 01 ದ್ವಿಚಕ್ರವಾಹನವನ್ನು ಜಫ್ತು ಪಡಿಸಿಕೊಂಡಿದ್ದು , ಒಟ್ಟು 05 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ದಾಳಿಯಲ್ಲಿ ಅರಣ್ಯ ಸಂಚಾರಿದಳದ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಮಮತಾ ಅಗಡಿ, ಉಪ ವಲಯ ಅರಣ್ಯಾಧಿಕಾರಿಗಳಾದ ಡಿ.ಆರ್.ಹಣಜಿ ಮತ್ತು ಐ.ಎಂ . ಅಕ್ಕಿ , ಮಲ್ಲಿಕಾರ್ಜುನ ಮಡಿವಾಳರ ಹಾಗೂ ಶರಣಬಸವೇಶ್ವರ ಹತ್ತರಕಿ , ರಶೀದ ಮಾಣಿಕಬಾಯಿ ಅರಣ್ಯ ರಕ್ಷಕರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ರಾಣೇಬೆನ್ನೂರು ಕೃಷ್ಣ ಮೃಗ ವನ್ಯಧಾಮದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಯಶಸ್ವಿಯಾಗಲು ಸಹಕರಿಸಿದರು .

ಆರೋಪಿಗಳ ಮಾಹಿತಿ ಹೀಗಿದೆ : ತ್ಯಾಗರಾಜ ಲಕ್ಷ್ಮಣ ಲಮಾಣಿ , ಸಾ || ಕಜ್ಜರಿ , ತಾ || ರಾಣೆಬೆನ್ನೂರು, ಗುರುನಾಥ ಬಸವರಾಜ ಐರಾಣಿ , ನಾ || ರಾಣೇಬೆನ್ನೂರು , ಬೀರಪ್ಪ ನಾಗಪ್ಪ ಮೆಡ್ಲೇರಿ , ಸಾ || ದೇವರಗುಡ್ಡ , ತಾ || ರಾಣೇಬೆನ್ನೂರು , ತಿರುಕಪ್ಪ ಮರಿಯಪ್ಪ ಗೋಡೇರ , ಸಾ || ಬುಡಪ್ಪನಹಳ್ಳಿ , ತಾ || ಬ್ಯಾಡಗಿ, ನಾಗಪ್ಪ ದ್ಯಾಮಪ್ಪ ಹರಿಜನ , ಸಾ || ಬರಡಿ , ತಾ || ಹಾವೇರಿ ಇವರನ್ನು ಬಂಧಿಸಲಾಗಿದೆ.

Edited By :
PublicNext

PublicNext

26/07/2022 08:57 am

Cinque Terre

18.2 K

Cinque Terre

0

ಸಂಬಂಧಿತ ಸುದ್ದಿ