ಬೆಂಗಳೂರು : ಕೇವಲ ಮೂರು ತಿಂಗಳ ಅಂತರದಲ್ಲಿ ಮೂವರು ಉಗ್ರರು ಸಿಲಿಕಾನ್ ಸಿಟಿಯಲ್ಲಿ ಅರೆಸ್ಟ್ ಆಗಿದ್ದಾರೆ. ಸಿಲಿಕಾನ್ ಸಿಟಿ ಉಗ್ರರಿಗೆ ಸ್ಲೀಪರ್ ಸೆಲ್ ನೆಲೆಯಾಗ್ತಿದ್ಯಾ ಎನ್ನುವ ಅನುಮಾನ ಹೆಚ್ಚಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್, ಬಾಂಗ್ಲಾ ಟೆರರ್ ಇದೀಗ ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯ ಶಂಕಿತ ಉಗ್ರ ಅರೆಸ್ಟ್ ಆಗಿದ್ದು ಸಾಕಷ್ಟು ಆತಂಕ ಮೂಡಿಸಿದೆ.
ಸದ್ಯ ಸಿಸಿಬಿ ಪೊಲೀಸರಿಂದ ಅಕ್ತರ್ ಹುಸೇನ್ ಬಂಧನದವಾಗಿದ್ದು, ಈ ಹಿಂದೆಯೇ ಇಬ್ಬರು ಉಗ್ರರ ಬಂಧನವಾಗಿತ್ತು.ಬೊಮ್ಮನಹಳ್ಳಿಯಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಬಾಂಗ್ಲಾ ಮೂಲದ ಉಗ್ರ ಫಾಜಿಲ್ ಬೊಮ್ಮನಹಳ್ಳಿಯಲ್ಲಿ ವಾಸವಾಗಿದ್ದ.
ಪಶ್ಚಿಮ ಬಂಗಾಳದಲ್ಲಿ ವಿಜ್ಞಾನಿ, ಬ್ಲಾಗರ್ ಹತ್ಯೆ ಮಾಡಿ ಬೆಂಗಳೂರಲ್ಲಿ ನೆಲೆಸಿದ್ದ ಈತ ಅಕ್ರಮವಾಗಿ ಅಸ್ಸಾಂ ಮೂಲಕ ಭಾರತಕ್ಕೆ ನುಸುಳಿ ಬೆಂಗಳೂರಲ್ಲಿ ನೆಲೆಸಿದ್ದ. ಕೆಲವೇ ದಿನಗಳ ಹಿಂದೆ ಪಶ್ಚಿಮ ಬಂಗಾಳ ಪೊಲೀಸರು ಆರೋಪಿಯನ್ನ ಅರೆಸ್ಟ್ ಮಾಡಿ ಕರೆದೊಯ್ದಿದ್ರು .ಇದಕ್ಕೂ ಹಿಂದೆ ಶ್ರೀರಾಮಪುರದಲ್ಲಿ ಉಗ್ರ ತಾಲಿಬ್ ಹುಸೇನ್ ನನ್ನು ಜಮ್ಮು ಕಾಶ್ಮೀರ ಪೊಲೀಸ್ರು ಬಂಧಿಸಿದ್ರು. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ತಾಲಿಬ್ ಹುಸೇನ್ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಶ್ರೀ ರಾಮಪುರದ ಮಸೀದಿಯಲ್ಲಿ ಆಶ್ರಯ ಪಡೆದಿದ್ದ.
ಇನ್ನೂ ನಗರದಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಉಗ್ರರು ಸಿಲಿಕಾನ್ ಸೆರೆಯಾಗುತ್ತಿದ್ದು ಸದ್ಯ ಬೆಂಗಳೂರು ಉಗ್ರರ ಅಡಗುತಾಣವಾಗ್ತಿದ್ಯಾ ಎನ್ನುವ ಅನುಮಾನ ಶುರುವಾಗಿದೆ.
ಇನ್ನೂ ತಡ ರಾತ್ರಿಬಂಧನವಾಗಿರೋ ಶಂಕಿತ ಉಗ್ರ ಅಕ್ತರ್ ಹುಸೇನ್ ಮೂಲಭೂತವಾದಿಯಾಗಿದ್ದ ಎಂದು ತಿಳಿದು ಬಂದಿದೆ. ಉಗ್ರ ಸಂಘಟನೆಗಳಿಗೆ ಸೇರಬೇಕು,ಉಗ್ರ ಚಟುವಟಿಕೆಗಳಿಗೆ ಸಹಾಯ ಮಾಡಬೇಕು ಅನ್ನುವ ನಿಟ್ಟಿನಲ್ಲಿ ಆಸಕ್ತಿ ಹೊಂದಿದ್ದ. ಉಗ್ರರೊಂದಿಗೆ ಸಂಪರ್ಕ ಹೊಂದುವ ಬಗ್ಗೆ ಪ್ರಯತ್ನ ನಡೆಸಿದ್ದ ಎನ್ನುವ ಮಾಹಿತಿಯನ್ನು ಪೊಲೀಸ್ರು ಮಾಹಿತಿ ಕಲೆ ಹಾಕಿದ್ದಾರೆ.
ಅಷ್ಟೇ ಅಲ್ಲದೆ ಮೂಲಭೂತವಾದಿಯಾಗಿ ಹಲವಾರು ಪೋಸ್ಟ್ ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಶಂಕಿತ ಉಗ್ರನ ಬಗ್ಗೆ ಕೇಂದ್ರ ಐಬಿ ಕೂಡ ಮಾಹಿತಿ ಕಲೆ ಹಾಕಿತ್ತು.ಇವ್ರ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತನನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.
ಇನ್ನು ಶಂಕಿತ ಮೂಲತಃ ಅಸ್ಸಾಂನವನಾಗಿದ್ದು, ಎಷ್ಟು ವರ್ಷಗಳಿಂದ ಬೆಂಗಳೂರಲ್ಲಿ ಇದ್ದ ಎನ್ನುವುದು ತನಿಖೆಯಿಂದ ಬಹಿರಂಗೊಳ್ಳಬೇಕಿದೆ.
PublicNext
25/07/2022 11:37 am