ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಕಲಿ ಚಿನ್ನದ ಆಮಿಷ : 10 ಲಕ್ಷ ವಂಚಿಸಿದ್ದ ಆರೋಪಿ ಅರೆಸ್ಟ್!

ಕೊರಟಗೆರೆ : ಒಂದು ಕೋಟಿ ಬೆಲೆಬಾಳುವ 2 ಕೆಜಿ ಚಿನ್ನದ ನಿಧಿ ಸಿಕ್ಕಿದೆ ಇದನ್ನು 10 ಲಕ್ಷ ರೂಗೆ ಮಾರಾಟ ಮಾಡುತ್ತೇವೆ ಎಂದು ಆಂಧ್ರ ಮೂಲದ ವ್ಯಕ್ತಿಯೊಬ್ಬನಿಗೆ ಪುಸಲಾಯಿಸಿ ಎರಡು ಅಸಲಿ ಗುಂಡುಗಳನ್ನು ಪರೀಕ್ಷೆಗೆ ಒಳಪಡಿಸಿ ಉಳಿದ 2 ಕೆಜಿ ನಕಲಿ ಚಿನ್ನದ ಗುಂಡುಗಳನ್ನು ನೀಡಿ ಯಾಮಾರಿಸಿ ಪರಾರಿಯಾಗಿದ್ದ ಕತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ಕೊರಟಗೆರೆ ಕಳ್ಳರು ಯಶಸ್ವಿಯಾಗಿದ್ದಾರೆ.

ಆರೋಪಿಗಳನ್ನು ಕೊರಟಗೆರೆ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿ ಮೂಲದವರು ಎಂದು ಗುರುತಿಸ ಲಾಗಿದ್ದು,ಈಗ ಮುನಿರಾಜು(22) ಆರೋಪಿಯನ್ನು ಬಂಧಿಸಿದ್ದು ಈತನ ಸ್ನೇಹಿತರಾದ ಇಬ್ಬರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ನೆರೆಯ ತೆಲಂಗಾಣ ಮೂಲದ ಶ್ರೀನಿವಾಸ್ ಎಂಬುವ ವ್ಯಕ್ತಿಗೆ ನಿಧಿ ಸಿಕ್ಕಿರುವ ಮಾಹಿತಿ ಯನ್ನು ತಿಳಿಸಿ 10 ಲಕ್ಷ ರೂಪಾಯಿ ಪಡೆದು ನಕಲಿ ಚಿನ್ನ ನೀಡಿ ಪರಾರಿ ಯಾಗಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಮನೆಗೆ ಹೋಗಿ ಇದರ ಬಗ್ಗೆ ಪ್ರಶ್ನಿಸಿದಾಗ ವಂಚನೆಗೊಳಗಾದ ತೆಲಂಗಾಣ ಮೂಲದ ಶ್ರೀನಿವಾಸ್ ರಾವ್ ಅವರಿಗೆ ಆರೋಪಿಗಳು ಹೊಡೆದು ಕಳುಹಿಸಿದ್ದರು ನಂತರ ಶ್ರೀನಿವಾಸರಾವ್ ಕೊರಟಗೆರೆ ಠಾಣೆಗೆ ಪ್ರಕರಣದ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎರಡು ತಿಂಗಳ ಕಾರ್ಯಾಚರಣೆ ನಡೆಸಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಲು ತಂಡ ರಚನೆಯಾಗಿದೆ ಸಿಪಿಐ ಸಿದ್ದರಾಮೇಶ್ವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Edited By : Nirmala Aralikatti
PublicNext

PublicNext

25/07/2022 11:03 am

Cinque Terre

20.42 K

Cinque Terre

0

ಸಂಬಂಧಿತ ಸುದ್ದಿ