ದಾವಣಗೆರೆ: ವಿವಿಧೆಡೆ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 8.71 ಲಕ್ಷ ರೂ. ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ವಿದ್ಯಾನಗರ, ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆದಿತ್ತು. 2021ರ ಜೂನ್ 8ರಂದು ಮನೆ ಕಳ್ಳತನ ನಡೆದಿತ್ತು. 28.350 ಗ್ರಾಂ ಚಿನ್ನಾಭರಣ, 2.864 ಕೆಜಿ ಆಭರಣಗಳನ್ನು ಪಿಎಸ್ ಐ ಪುಷ್ಪಲತಾ ನೇತೃತ್ವದ ತಂಡ ವಶಪಡಿಸಿಕೊಂಡಿದೆ.
ಇನ್ನು, ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ, 100 ಗ್ರಾಂ ಬಂಗಾರದ ಗಟ್ಟಿ, 1,100 ಬೆಳ್ಳಿ ಆಭರಣ ವಶಕ್ಕೆ ಪಡೆಯಲಾಗಿದೆ. ಇನ್ನೂ ಮೂವರು ಆರೋಪಿಗಳಿದ್ದು, ಪೊಲೀಸರು ಪತ್ತೆಗೆ ಬಲೆ ಬೀಸಿದ್ದಾರೆ.
ಪಿಎಸ್ ಐ ಎಸ್. ಕಾಂತರಾಜ್, ರೇಣುಕಾ ಮತ್ತವರ ತಂಡ ಕಳ್ಳರನ್ನು ಬಂಧಿಸಿದೆ. ನಗರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ವೃತ್ತ ನಿರೀಕ್ಷಕರಾದ ಕೆ.ಎನ್. ಗಜೇಂದ್ರಪ್ಪ, ಗುರುಬಸವರಾಜ್ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಸೆರೆ ಹಿಡಿಯಲಾಗಿದೆ.
PublicNext
23/07/2022 04:50 pm