ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಧುಗಿರಿ: ಸಂವಿಧಾನ ಶಿಲ್ಪಿ ಫೋಟೋಗೆ ಅಪಮಾನ; ವರದಿ ಪ್ರಸಾರವಾಗುತ್ತಿದ್ದಂತೆಯೇ ಗೌರವ!

ವರದಿ: ರಾಘವೇಂದ್ರ ದಾಸರಹಳ್ಳಿ

ಮಧುಗಿರಿ : ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಫೋಟೋವನ್ನು ಅವಮಾನಿಸಿ ರುವಂತಹ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು ಈ ವರದಿಯನ್ನು ಪಬ್ಲಿಕ್ ನೆಕ್ಸ್ಟ್ ಎಕ್ಸ್ಕ್ಲೂಸಿವ್ ಆಗಿ ಬಿತ್ತರಿಸಿತ್ತು.

ಫೋಟೋ ಗೋಡೆಗೆ ನೇತು ಹಾಕದೆ ವೇಸ್ಟ್ ರೂಮ್ ನಲ್ಲಿ ಅನಾವಶ್ಯಕ ವಸ್ತುವಿನಂತೆ ಇಡಲಾಗಿತ್ತು ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಹೂವನ್ನು ಹಾಕುವುದರ ಮೂಲಕ ಆಸ್ಪತ್ರೆಯ ಮುಖ್ಯ ದ್ವಾರದಲ್ಲಿಯೇ ಎಲ್ಲರಿಗೂ ಕಾಣಿಸುವಂತೆ ಗೋಡೆಗೆ ನೇತು ಹಾಕಿದ್ದಾರೆ. ತಾಲೂಕಿನ ಹಲವು ದಲಿತ ಪರ ಸಂಘಟನೆಗಳು ಮತ್ತು ಮಧುಗಿರಿ ತಾಲೂಕಿನ ಜನತೆ ಪಬ್ಲಿಕ್ ನೆಕ್ಸ್ಟ್ ವರದಿಗೆ ಮತ್ತು ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

22/07/2022 11:04 pm

Cinque Terre

50.33 K

Cinque Terre

0

ಸಂಬಂಧಿತ ಸುದ್ದಿ