ಚಿಕ್ಕಬಳ್ಳಾಪುರ: ಅಂಗನವಾಡಿ ಕಾರ್ಯಕರ್ತೆ ಕೊಲೆ ಕೇಸ್ಗೆ ಬಿಗ್ಟ್ವಿಸ್ ಸಿಕ್ಕಿದ್ದು ಪತಿಯೇ ಹಂತಕನಾಗಿದ್ದಾನೆ. ಆರೋಪಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜುಲೈ 12ರಂದು ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಅಂಗನವಾಡಿ ಕಾರ್ಯಕರ್ತೆ ವೆಂಕಟಲಕ್ಷ್ಮಮ್ಮ(51) ಕೊಲೆ ಪ್ರಕರಣಣದಲ್ಲಿ ಆಕೆಯ ವಿಚ್ಚೇದಿತ ಗಂಡ ಅಂಜಪ್ಪನನ್ನ ಬಂಧಿಸಲಾಗಿದೆ.
ವೆಂಕಟಲಕ್ಷ್ಮಮ್ಮಳಿಗೆ ವಿಚ್ಚೇದನ ನೀಡಿದ್ದ ಅಂಜಪ್ಪ, ಬೇರೊಂದು ಮದುವೆಯಾಗಿದ್ದ. ಜುಲೈ 11ರಂದು ರಾತ್ರಿ ವೆಂಕಟಲಕ್ಷಮ್ಮ ಮನೆಗೆ ಬಂದಿದ್ದ ಗಂಡ ಅಂಜಪ್ಪ, ವೆಂಕಟಲಕ್ಷಮ್ಮ ಜೊತೆ ಜಮೀನು ವಿಚಾರವಾಗಿ ಗಲಾಟೆ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಮೊದಲೇ ಪ್ಲಾನ್ ಮಾಡಿಕೊಂಡು ಬಂದಂತೆ, ಜರ್ಕಿನ್ನಲ್ಲಿದ್ದ ಬ್ಲೇಡ್ ತೆಗೆದು ವೆಂಕಟಲಕ್ಷಮ್ಮ ಕತ್ತು ಕೊಯ್ದಿದ್ದಾನೆ ಎನ್ನಲಾಗಿದೆ.
ಆಕೆಯೆ ಕಿವಿಯ ಓಲೆ, ಕತ್ತಿನಲ್ಲಿದ್ದ ಸರ ಹಾಗೂ ಬಿರುವಿನಲ್ಲಿದ್ದ ನೆಕ್ಲೆಸ್ ತಗೊಂಡು ಅಲ್ಲಿಂದ ಪರಾರಿಯಾಗಿದ್ದ. ಮಾರನೇ ದಿನ ಆಳಿಯನ ಮೂಲಕ ವಿಷಯ ಗೊತ್ತಾಗಿ ಅಲ್ಲಿಗೆ ಬಂದು ಏನೂ ಗೊತ್ತಿಲ್ಲದವನಂತೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾನೆ. ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದಾಗ ಅಂಜಪ್ಪನ ಆಸಲಿಯತ್ತು ಬಯಲಾಗಿದ್ದು ಕೊಲೆಗಾರನನ್ನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
PublicNext
20/07/2022 10:27 am