ಪಾಟ್ನಾ: ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನದ ಉದಯ್‌ಪುರ್, ಮಹಾರಾಷ್ಟ್ರದ ಅಮರಾವತಿ ನಂತರ ಬಿಹಾರದ ಸೀತಾಮರ್ಹಿಯಲ್ಲೂ ಅದೇ ರೀತಿಯ ದಾಳಿ ನಡೆದಿದೆ. ನೂಪುರ್ ಶರ್ಮಾ ಅವರ ವಿವಾದಿತ ಹೇಳಿಕೆಯ ವಿಡಿಯೋ ನೋಡಿದ ಯುವಕನೊಬ್ಬನಿಗೆ ಚೂರಿಯಿಂದ ಆರು ಬಾರಿ ಇರಿದ ಘಟನೆ ನಡೆದಿದೆ.
ಅಂಕಿತ್ ಝಾ (23) ಹಲ್ಲೆಗೆ ಒಳಗಾದ ಯುವಕ. ಜುಲೈ 15ರ ಸಂಜೆ ಗುಂಪೊಂದು ಪಾನ್ ಶಾಪ್‍ನಲ್ಲಿ ಅಂಕಿತ್ ಝಾ ಜೊತೆಗೆ ಜಗಳ ಆರಂಭಿಸಿತ್ತು. ಈ ವೇಳೆ ಚಾಕು ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಅಂಕಿತ್ ಝಾ ದರ್ಭಾಂಗಾದ ಸ್ಥಳೀಯ ನರ್ಸಿಂಗ್ ಹೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೂಪುರ್ ಶರ್ಮಾ ಅವರ ವೀಡಿಯೊವನ್ನು ವಾಟ್ಸಾಪ್ ಸ್ಟೇಟಸ್ ಆಗಿ ಅಂಕಿತ್ ಝಾ ಅಪ್‌ಲೋಡ್ ಮಾಡಿದ್ದರು. ಇದೇ ವಿಡಿಯೋವನ್ನು ವೀಕ್ಷಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ತನ್ನೊಂದಿಗೆ ಗಲಾಟೆ ಮಾಡಿದ್ದು, ನಂತರ ಯಾರೋ ಬೆನ್ನಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಅಂಕಿತ್ ಝಾ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಈ ಘಟನೆ ನಂತರ ಮರುದಿನ ಯುವಕ ನಾಲ್ವರು ಮಂದಿ ಮೇಲೆ ದೂರು ದಾಖಲಿಸಿದ್ದು, ಅವರಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
PublicNext
19/07/2022 04:22 pm