ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರ ಒಳ ಉಡುಪು ಬಿಚ್ಚಿಸಿದ ಮೇಲ್ವಿಚಾರಕರು

ಕೇರಳ : ವಿದ್ಯಾರ್ಥಿನಿಯರು ತಮ್ಮ ಒಳ ಉಡುಪುಗಳನ್ನು ಬಿಚ್ಚಿಟ್ಟು ನೀಟ್ ಪರೀಕ್ಷೆ ಬರೆದ ಅಮಾನವೀಯ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಮಾರ್ಥೋಮಾ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ. ಹೌದು ನಿನ್ನೆ (ರವಿವಾರ) ನಡೆದ NEET ಪರೀಕ್ಷೆ ವೇಳೆ ಸುಮಾರು 100ಕ್ಕೂ ಹೆಚ್ಚು ಮಹಿಳಾ ಪರೀಕ್ಷಾ ಅಭ್ಯರ್ಥಿಗಳ ಒಳ ಉಡುಪುಗಳನ್ನ ಬಿಚ್ಚಿಸಿ ಪರೀಕ್ಷಾ ಮೇಲ್ವಿಚಾರಕರು ಹೀನಾಯವಾಗಿ ಅವಮಾನಿಸಲಾಗಿದೆ. ಈ ಕುರಿತು ವಿದ್ಯಾರ್ಥಿನಿಯೊಬ್ಬರ ತಂದೆ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಪರೀಕ್ಷಾ ಕೇಂದ್ರದ ಒಳಗೆ ಅಭ್ಯರ್ಥಿಗಳನ್ನ ಬಿಡುವ ವೇಳೆ ಮೆಟಲ್ ಡೆಟೆಕ್ಟರ್ ನಲ್ಲಿ (Metal Detector)ನಲ್ಲಿ ಸದ್ದು ಉಂಟಾಗಿದೆ. ಹೀಗಾಗಿ ಮಹಿಳಾ ಅಭ್ಯರ್ಥಿಗಳ ಒಳ ಉಡುಪುಗಳನ್ನ ಬಿಚ್ಚಿಸಿ ಅವಮಾನಿಸಿದ್ದಾರೆ. ಒಳ ಉಡುಪುಗಳಲ್ಲಿದ್ದ ಬಟನ್, ಹುಕ್ಸ್ ನಂತಹ ಮೆಟಲ್ ವಸ್ತುಗಳಿಂದಾಗಿ ಡಿಟೆಕ್ಟರ್ ನಲ್ಲಿ ಶಬ್ದ ಆಗಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದಾರೆ. ಕೊನೆಗೆ ಕೆಲವರು ಒಳ ಉಡುಪು ಬಿಚ್ಚಿಟ್ಟು, ಪರೀಕ್ಷೆ ಬರೆದರೆ ಇನ್ನು ಕೆಲವರು ಈ ಅವಮಾನ ತಾಳದೆ ಪರೀಕ್ಷೆ ಬರೆಯದೇ ಮನೆಗೆ ಮರಳಿದ್ದಾರೆ.

ಇದೇ ರೀತಿಯ ತೊಂದರೆಯನ್ನ ಸುಮಾರು 100 ಮಹಿಳಾ ಅಭ್ಯರ್ಥಿಗಳು ಅನುಭವಿಸಿದ್ದಾರೆ. ಈ ಸಂಬಂಧ ಕೊಟ್ಟರಕ್ಕ ಡಿವೈಎಸ್ ಪಿಗೆ ಪೋಷಕರೊಬ್ಬರು ದೂರು ನೀಡಿದ್ದಾರೆ. ಪರೀಕ್ಷಾ ನಿಯಮಗಳ ಪ್ರಕಾರವೇ ಹೋಗಿದ್ದರೂ, ನನ್ನ ಮಗಳನ್ನ ಅವಮಾನಿಸಲಾಗಿದೆ. ಮತ್ತೆ ಯಾವತ್ತೂ ಮಗಳು ನೀಟ್ ಪರೀಕ್ಷೆ ಬರೆಯಲ್ಲ ಎಂದು ಹೇಳಿದ್ದಾಳೆ. ಕೂಡಲೇ ಪರೀಕ್ಷಾ ಮೇಲ್ವಿಚಾರಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Edited By : Nirmala Aralikatti
PublicNext

PublicNext

18/07/2022 07:43 pm

Cinque Terre

42.1 K

Cinque Terre

12