ದೆಹಲಿ : ಅವರೆಲ್ಲರು ನಿತ್ಯ ಒಂದಾಗಿ ಕೆಲಸ ಮಾಡುವವರು ಹೀಗೆ ಜೊತೆಯಾಗಿ ಕೆಲಸ ಮಾಡುತ್ತಿರುವ ವೇಳೆ ಸಹ ಸಿಬ್ಬಂದಿ ಜೊತೆ ಕ್ಯಾತೆ ತೆಗೆದು ಮೂರು ಪೊಲೀಸರ ಮೇಲೆ ಫೈರಿಂಗ್ ನಡೆಸಿದ ಘಟನೆ ದೆಹಲಿಯ ರೋಹಿಣಿ ಪ್ರದೇಶದಲ್ಲಿ ನಡೆದಿದೆ.
ಇನ್ನು ಸಿಕ್ಕಿಂ ಪೊಲೀಸ್ ಜವಾನ್ ಈ ಕೃತ್ಯ ನಡೆಸಿದ್ದಾನೆ ಎಂದು ವರದಿಯಾಗಿದೆ. ಕೃತ್ಯದಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಘಟನೆಯು ಹೈದರ್ ಪುರ್ ಪ್ಲಾಂಟ್ ಬಳಿ ನಡೆದಿದೆ. ಆರೋಪಿ ಜವಾನ್ ನನ್ನ ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ.
PublicNext
18/07/2022 07:17 pm