ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

15ರ ಬಾಲಕಿ ತನ್ನನ್ನು ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಎಲೆಕ್ಟ್ರಿಕ್ ಟವರ್ ಏರಿದ 19ರ ಯುವಕ

ಚೆನ್ನೈ: ಗೆಳತಿಯೊಬ್ಬಳು ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿದ ಘಟನೆ ಚೆನ್ನೈನ ಕ್ರೋಮ್‍ಪೇಟ್‍ನಲ್ಲಿ ನಡೆದಿದೆ.

ಕ್ರೋಂಪೇಟೆಯ ರಾಧಾ ನಗರದ ನಿವಾಸಿಯಾದ ಕೃಷ್ಣ (19) ಹೈವೋಲ್ಟೇಜ್ ವಿದ್ಯುತ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿದ ಯುವಕ. ಕೃಷ್ಣ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತ ತನ್ನ ಪ್ರದೇಶದ 15 ವರ್ಷದ ಹುಡುಗಿಯನ್ನು ಪ್ರೀತಿ ಮಾಡಿದ್ದಾನೆ. ಆ ನಂತರ ಆತ ಅವಳ ಬಳಿ ಮದುವೆ ಪ್ರಸ್ತಾಪವನ್ನು ಇಟ್ಟಿದ್ದ. ಆದರೆ ಆಕೆ ನಿರಾಕರಿಸಿದ್ದಾಳೆ. ಎಲ್ಲಾ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಆತ 80 ಅಡಿ ಎತ್ತರದ ದುರ್ಗಾನಗರದ ವಿದ್ಯುತ್ ಟವರ್‌ನ ಮೇಲೆ ಹತ್ತಿ ಪ್ರತಿಭಟನೆ ನಡೆಸಿದನು.

ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ಇಲಾಖೆ ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ದೌಡಾಯಿಸಿ ಶಾಂತಿ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು. ಆದರೂ ಆತ ಕೆಳಗೆ ಇಳಿಯಲು ಒಪ್ಪಿರಲಿಲ್ಲ. ನಂತರ ಆಕೆಯನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಆತ ಕೆಳಗೆ ಇಳಿದಿದ್ದಾನೆ. ಘಟನೆ ಸಂಬಂಧಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಈತನ ಕಾರಣದಿಂದಾಗಿ ವಿದ್ಯುತ್ ಸರಬರಾಜು ನಿಗಮದಿಮದ ಕೆಲಕಾಲ ವಿದ್ಯುತ್ ಅನ್ನು ಸ್ಥಗಿತಗೊಳಿಸಲಾಗಿತ್ತು.

ರೆತರಬೇಕಾಯಿತು.

Edited By : Vijay Kumar
PublicNext

PublicNext

18/07/2022 10:23 am

Cinque Terre

29.27 K

Cinque Terre

2

ಸಂಬಂಧಿತ ಸುದ್ದಿ