ಕುಣಿಗಲ್: ಎರಡು ಚಿರತೆಗಳ ಕಾದಾಟದಲ್ಲಿ ಗಂಡು ಚಿರತೆ ಮೃತಪಟ್ಟಿರುವ ಘಟನೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಶಂಕು ಒಡೆಯರಪಾಳ್ಯದಲ್ಲಿ ಭಾನುವಾರ ನಡೆದಿದೆ.
ಹುತ್ರಿದುರ್ಗ ಹೋಬಳಿಯ ಶಿವಣ್ಣ ಎಂಬುವರಿಗೆ ಜಮೀನಿನಲ್ಲಿ ಚಿರತೆಗಳ ಕಾದಾಟ ಸದ್ದು ಕೇಳಿಬಂದಿತ್ತು. ಇದರಿಂದ ಗ್ರಾಮಸ್ಥರು ಭಯಬೀತರಾಗಿ ಸದ್ದು ನಿಂತಮೇಲೆ ಹೋಗಿ ಪರಿಶೀಲಿಸಿದಾಗ ಗಂಡು ಚಿರತೆಯ ಕಳೆಬರಹ ಪತ್ತೆಯಾಗಿದೆ. ವಲಯ ಅರಣ್ಯಾಧಿಕಾರಿ ಮನ್ಸೂರ್ ಪ್ರಕರಣ ದಾಖಲಿಸಿಕೊಂಡಿದ್ದು, ಕಾದಾಟದಿಂದ ಚಿರತೆ ಮೃತಪಟ್ಟಿರುವ ಬಗ್ಗೆ ಖಚಿತಪಡಿಸಿದ್ದಾರೆ.
PublicNext
18/07/2022 09:21 am