ಬೆಳಗಾವಿ: ಬೆಳಗಾವಿ ತಾಲೂಕಿನ ದೇಸೂರು ಕ್ರಾಸ್ ಬಳಿ ಬೈಕ್ ಮತ್ತು ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇವತ್ತು ನಡೆದಿದೆ.
ಗಜಪತಿ ಗ್ರಾಮದ ಅಕ್ಷಯ್ ಹಿರೇಮಠ ಮೃತ ದುರ್ದೈವಿ ಎಂದು ಗುರುತಿಸಲಾಗಿದ್ದು, ಮತ್ತೋರ್ವ ನಾಗಯ್ಯ ಹಿರೇಮಠ ಸ್ಥಿತಿ ಗಂಭೀರವಾಗಿದ್ದಾನೆ. ಗಾಯಾಳು ನಾಗಯ್ಯನನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವರದಿ- ಸಂತೋಷ ಬಡಕಂಬಿ.
PublicNext
17/07/2022 10:00 pm