ಬೆಂಗಳೂರು: ಚಂದ್ರು ಕೊಲೆ ರಾಜಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಈ ಕೊಲೆಯ ಒಟ್ಟು ಪ್ರಕರಣದ ತನಿಖೆಯನ್ನ ಸಿಐಡಿ ಮುಕ್ತಾಯಗೊಳಿಸಿದ್ದು, ಈಗ ನ್ಯಾಯಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದೆ.
ಚಂದ್ರು ಕೊಲೆ ಆರೋಪಿ ಶಾಹಿದ್ ಪಾಷಾ "ಕನ್ನಡ ಬರೋದಿಲ್ಲ ಉರ್ದುವಿನಲ್ಲಿಯೇ ಹೇಳು" ಎಂದು ಜೋರು ಧ್ವನಿಯಲ್ಲಿಯೇ ಹೇಳಿದ್ದಾನೆ. ಇದನ್ನೇ ಸಿಐಡಿ ತನ್ನ ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಿದೆ.
ಆದರೆ, ಕಮಿಷನರ್ ಕಮಲ್ ಪಂತ್, "ಕನ್ನಡ ಬರುವುದಿಲ್ಲ" ಎಂಬ ಮಾತು ಘಟನೆಗೆ ಕಾರಣ ಅಲ್ಲವೇ ಅಲ್ಲ ಅಂತಲೇ ಹೇಳಿದ್ದರು. ಈಗ ಸಿಐಡಿ ಅದೇ ವಿಷಯವನ್ನೇ ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಿ ಘಟನೆಯ ವಿವರಣೆಯನ್ನ ನೀಡಿದೆ.
PublicNext
17/07/2022 11:18 am