ನವದೆಹಲಿ: ಮಳೆ ಅಬ್ಬರ ಹೆಚ್ಚಾಗಿದೆ. ನದಿಗಳು ತುಂಬಿ ಹರಿಯುತ್ತಿವೆ. ಆದರೆ,ಮಹಾರಾಷ್ಟ್ರದಲ್ಲೊಬ್ಬ ಯುವಕ ತುಂಬಿ ಹರಿಯುತ್ತಿರೋ ನದಿಗೆ ಹಾರಿ ಈಗ ನಾಪತ್ತೆ ಆಗಿದ್ದಾನೆ.
ಮಹಾರಾಷ್ಟ್ರದ ಮಾಲೆಗಾಂವ್ ನಲ್ಲಿರೋ ಗಿರ್ನಾ ನದಿಗೆ ಹಾರಿದ ಯುವಕನ ಹೆಸರು ನಯೀಮ್ ಅಮಿನ್ (23) ಎಂದು ಗುರುತಿಸಲಾಗಿದೆ.
ಯುವಕ ನದಿಗೆ ಹಾರಿದ ಸುದ್ದಿ ತಿಳಿದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಿದ್ದಾರೆ. ತಡರಾತ್ರಿಯಲ್ಲೂ ಯುವಕನಿಗಾಗಿಯೇ ಶೋಧ ನಡೆಸಿದ್ದಾರೆ. ಆದರೂ ಪತ್ತೆಯಾಗಿಲ್ಲ. ಶೋಧ ಕಾರ್ಯ ಮುಂದುವರೆದಿದೆ.
PublicNext
15/07/2022 06:03 pm