ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೀವದ ಹಂಗು ತೊರೆದು ಹೋರಾಡಿದ ಸೆಕ್ಯೂರಿಟಿ-ತಪ್ಪಿತು ಭಾರೀ ದರೋಡೆ !

ಚಂಡೀಗಢ: ಸೆಕ್ಯೂರಿಟಿ ಗಾರ್ಡ್ ಒಬ್ಬರು ತಮ್ಮ ಜೀವದ ಹಂಗು ತೊರೆದು ದರೋಡೆಯೊಂದನ್ನ ತಪ್ಪಿಸಿದ್ದಾರೆ. ಈ ಒಂದು ಘಟನೆ ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸಿಸಿಟಿವಿ ವೀಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕೆಚ್ಚೆದೆಯ ಆ ಸೆಕ್ಯೂರಿಟಿ ಹೆಸರು ಮಂದರ್ ಸಿಂಗ್. ಈತನ ಮೇಲೆ ಮಂಗಳವಾರ ದರೋಡೆಕೋರರು ಥಳಿಸಿದ್ದಾರೆ.ಹರಿತವಾದ ಆಯುದಿಂದಲೂ ಹಲ್ಲೆ ಮಾಡಿದ್ದಾರೆ.

ಆದರೆ, ಇದಕ್ಕೆಲ್ಲ ಬಗ್ಗದೇ ಇರೋ ಮಂದರ್ ಸಿಂಗ್ ಹೋರಾಡಿದ್ದಾನೆ. ತನ್ನ ಬಳಿ ಇದ್ದ ಬಂದೂಕಿನಿಂದ ಆ ಮೂವರು ದರೋಡೆಕೋರರನ್ನ ಓಡಿಸಿದ್ದಾರೆ.

ಮೊಗಾದ ದಾರಾಪುರ್‌ ನಲ್ಲಿಯೇ ಈ ಘಟನೆ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ದರೋಡೆಕೋರರ ತಡೆಯಲು ಗುಂಡು ಹಾರಿಸಿದ್ದಾನೆ. ಆರೋಪಿಗಳನ್ನ ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಮೊಗ ಪೊಲೀಸ್ ಠಾಣೆಯ ಠಾಣಾಧಿಕಾರಿ ಜಸ್ವಿಂದರ್ ಸಿಂಗ್ ಹೇಳಿದ್ದಾರೆ.

Edited By :
PublicNext

PublicNext

14/07/2022 02:58 pm

Cinque Terre

56.42 K

Cinque Terre

1