ವಿಜಯಪುರ: ಒಂದು ಲಕ್ಷ ರೂಪಾಯಿ ಕಳ್ಳತನ ಮಾಡಿರೋ ಆರೋಪದ ಮೇಲೆ ಪಿಎಸ್‌ಐ ಸೋಮೇಶ್ ಗೆಜ್ಜಿ ಯುವಕನನ್ನ ಥಳಿಸಿದ್ದರು. ಆ ಯುವಕನ ಸಾವಿಗೂ ಕಾರಣ ಆಗಿದ್ದ ಪಿಎಸ್‌ಐ ಈಗ ಅಮಾನತುಗೊಂಡಿದ್ದಾರೆ. ಆದರೆ, ಮೃತ ದೇಹದ ಬಳಿ ಸಿಕ್ಕ ಆ ಒಂದು ಕವರ್‌ನಲ್ಲಿ ಬೇರೆಯದ್ದೆ ಸಾಕ್ಷಿ ಸಿಕ್ಕಿದೆ.
ಡೋಣೂರ ಗ್ರಾಮದ ಯುವಕ ಸೋಮಶೇಖರ್ ನಾಗಮೋತಿ ಜು.12 ರಂದು ಕೊಲ್ಹಾರ ಸೇತುವೆ ಬಳಿ ಶವವಾಗಿ ಪತ್ತೆ ಆಗಿದ್ದ. ಈತ ಸಾವಿಗೂ ಮುನ್ನ ಡೆತ್ ನೋಟ್ ಬರೆದು ಸೆಲ್ಫಿ ವೀಡಿಯೋ ಕೂಡ ಮಾಡಿದ್ದ, "ನಾನೊಬ್ಬ ಅಮಾಯಕ,ಅನ್ಯಾಯದ ದುಡ್ಡು ಮುಟ್ಟೋದಿಲ್ಲ.ಮಾಡದೇ ಇರೋ ತಪ್ಪಿಗೆ ನನಗೇಕೆ ಶಿಕ್ಷೆ ? ಎಂದು ಪ್ರಶ್ನಿಸಿದ್ದ.
ನನ್ನ ಸಾವಿಗೆ ಪಿಎಸ್‌ಐ ಸೋಮೇಶ ಗೆಜ್ಜಿ ಕಾರಣ. ಇವರ ಸಹೋದರ ಸಚಿನ್ ಹಾಗೂ ನಾನು ಕೆಲಸ ಮಾಡ್ತಿದ್ದ ಅಂಗಡಿಯ ಮಾಲೀಕ ಸಂತೋಷ್ ದೇಗಿನಾಳ ಮತ್ತು ಅವರ ಸಹೋದ ರವಿ ಕಾರಣ ಅಂತಲೇ ಬರೆದಿದ್ದಾನೆ.
ಏನ್ ಇದು ಕೇಸ್:ಸಂತೋಷ್ ದೇಗಿನಾಳ ಅವರ ಶಿವಗಿರಿ ಟೈಯರ್ಸ್ ಆ್ಯಂಡ್ ವ್ಹೀಲ್ಸ್ ನಲ್ಲಿ ಸೋಮಶೇಖರ್ ನಾಗಮೋತಿ ಕೆಲಸ ಮಾಡುತ್ತಿದ್ದ. ಪಿಎಸ್ಐ ಸೋಮಶ ಗೆಜ್ಜಿ ಸಹೋದರ ಚೇತನ್ ಕಾರ್ ಅನ್ನ ಇಲ್ಲಿ ವ್ಹೀಲ್ ಅಲೈನ್‌ಮೆಂಟ್‌ಗೆ ಬಿಡಲಾಗಿತ್ತು.
ಆದರೆ, ಅದು ಇಲ್ಲಿ ಸಾಧ್ಯವಾಗದೇ ಇದ್ದಾಗ, ಎದುರಿನ ಮತ್ತೊಂದು ಅಂಗಡಿಯಲ್ಲಿಯೇ ಮೃತ ಸೋಮಶೇಖರ್ ವ್ಹೀಲ್ ಅಲೈನ್‌ಮೆಂಟ್ ಮಾಡಿಸಿಕೊಂಡು ಬಂದಿದ್ದ. ಆದರೆ, ಕಾರ್ ನಲ್ಲಿದ್ದ 1 ಲಕ್ಷ ರೂಪಾಯಿ ಕಾಣೆಯಾಗಿದೆ ಎಂದು ತಗಾದೆ ತೆಗೆದಿದ್ದ. ಈ ಹಿನ್ನೆಲೆಯಲ್ಲಿ ಆದರ್ಶನಗರದ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.
PublicNext
14/07/2022 02:09 pm