ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಇಬ್ಬರು ಹೆಣ್ಮಕ್ಕಳನ್ನ ಬಾವಿಗೆ ತಳ್ಳಿ ಆತ್ಮಹತ್ಯೆಗೆ ಶರಣಾದ ತಾಯಿ

ವಿಜಯಪುರ: ಮಾನಸಿಕ ಖಿನ್ನತೆಗೊಳಗಾಗಿದ್ದ ಮಹಿಳೆಯೊಬ್ಬಳು ತನ್ನ ಇಬ್ಬರು ಮುದ್ದಾದ ಹೆಣ್ಣು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿನಗೂರು ಗ್ರಾಮದಲ್ಲಿ ನಡೆದಿದೆ.

ಅವ್ವಮ್ಮಾ ಶ್ರೀಶೈಲ ಗುಬ್ಬೇವಾಡ (32) ಆತ್ಮಹತ್ಯೆ ಮಾಡಿಕೊಂಡವಳು. ಅವ್ವಮ್ಮಾ ಕಳೆದ ಆರು ತಿಂಗಳಿನಿಂದ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎನ್ನಲಾಗಿದೆ. ಅವ್ವಮ್ಮಾಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ನಿನ್ನೆ (ಮಂಗಳವಾರ) ಇಬ್ಬರು ಹೆಣ್ಮಕ್ಕಳನ್ನ ಶಾಲೆಗೆ ಹೋಗಿದ್ದರು. ಇಬ್ಬರು ಮಕ್ಕಳು ಅಮ್ಮನ ಬಳಿಯೇ ಇದ್ದವು. ಪತಿ ಕುರಿ ಕಾಯಲು ಹೋದಾಗ ಅವ್ವಮ್ಮಾ ತನ್ನ 3 ವರ್ಷದ ಹಾಗೂ 1 ವರ್ಷದ ಹೆಣ್ಣು ಮಗುವನ್ನ ಬಾವಿಗೆ ತಳ್ಳಿದ್ದಾಳೆ. ನಂತರ ತಾನೂ ಕೂಡ ಬಾವಿಗೆ ಹಾರಿದ್ದಾಳೆ ಎನ್ನಲಾಗಿದೆ.

ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಶವಗಳನ್ನು ಬಾವಿಯಿಂದ ಮೇಲೆತ್ತಿದ್ದು, ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನ ಕಳುಹಿಸಲಾಗಿದೆ.

Edited By : Vijay Kumar
PublicNext

PublicNext

13/07/2022 04:58 pm

Cinque Terre

30.81 K

Cinque Terre

0

ಸಂಬಂಧಿತ ಸುದ್ದಿ