ನಾಗ್ಪುರ್: ಮದುವೆ ಮುಗಿಸಿಕೊಂಡು ಖುಷಿಯಲ್ಲಿಯೇ ಅವರು ಬರ್ತಾಯಿದ್ದರು. ಆದರೆ, ಅವರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ನದಿ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಘಟನೆ ನಾಗ್ಪುರ್ ಜಿಲ್ಲೆಯ ಕೆಲ್ವಾಡ್‌ನ ನಂದಗೌಮುಖ ಛತ್ರಪುರ ರಸ್ತೆಯ ಬ್ರಹ್ಮನ್ಮರಿ ನುಲ್ಲಾದಲ್ಲಿ ನಡೆದಿದೆ.
ರೇಲಿಂಗ್ಸ್ ಇಲ್ಲದೇ ಇರೋ ಸೇತುವೆ ಮೇಲೆ ಈ ಸ್ಕಾರ್ಪಿಯೋ ವಾಹನ ದಾಟಲು ಪ್ರಯತ್ನಿಸುತ್ತಿತ್ತು. ಆದರೆ, ನೀರಿನ ರಭಸಕ್ಕೆ ಸ್ಕಾರ್ಪಿಯೋ ವಾಹನ ಕೊಚ್ಚಿಕೊಂಡು ಹೋಗಿದೆ.
ಇದರ ಪರಿಣಾಮ ಇದರಲ್ಲಿದ್ದ 8 ಜನರಲ್ಲಿ 13 ವರ್ಷದ ಬಾಲಕ ಸೇರಿ ಮೂವರು ಸಾವನೊಪ್ಪಿದ್ದಾರೆ. ಇಬ್ಬರು ಸುರಕ್ಷಿತವಾಗಿ ಈಜಿ ಪಾರಾಗಿದ್ದಾರೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಪ್ರಯಾಣಿಸುತ್ತಿದ್ದವರನ್ನ ರೋಶ್ನಿ ಚೌಕಿಕರ್ (35) ಇವರ ಪುತ್ರ ದಾದು (13),ನೀಮು ಅತ್ನೆರ್ (45),ಮಧುಕರ್ ಪಾಟೀಲ್ (60) ಹಾಗೂ ಇವರ ಪತ್ನಿ ನಿರ್ಮಲಾ (35) ಎಂದು ಗುರುತಿಸಲಾಗಿದೆ. ಆದರೆ, ವಾಹನ ಚಾಲಕ ವಿಕಾಸ್ ದಿವ್ಟೆ (35) ನಾಪತ್ತೆಯಾಗಿದೆ.
ಸ್ಕಾರ್ಪಿಯೋ ವಾಹನ ಕೊಚ್ಚಿ ಹೋಗುವಾಗ ಇದರಲ್ಲಿದ್ದ ಜನ ರಕ್ಷಣೆಗೆ ಕೂಗಿದ್ದಾರೆ. ಆದರೆ, ರಕ್ಷಣೆಗೆ ಬಾರದ ಜನ ವೀಡಿಯೋ ತೆಗೆಯುತ್ತಲೇ ಇಲ್ಲಿ ನಿಂತಿರೋದು ದುರಂತವೇ ಸರಿ. ಅದೇ ವೀಡಿಯೋನೇ ಈಗ ವೈರಲ್ ಆದಂತಿದೆ.
PublicNext
13/07/2022 12:29 pm