ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋವುಗಳ ವಧೆ, ಅಕ್ರಮ ಮಾಂಸ ಮಾರಾಟ : ಕೆಲವರ ಬಂಧನ

ತುಮಕೂರು : ರಾಜ್ಯದಲ್ಲಿ ಗೋಮಾಂಸ ನಿಷೇಧವಿದ್ದರೂ ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿಯ ಬಿಸಿನೆಲೆ ಗ್ರಾಮದ ಕಚ್ಚ ನಾಯಕನ ಕಲ್ಲಿನ ಬಳಿ ಬಕ್ರಿದ್ ಹಬ್ಬಕ್ಕಾಗಿ ಹಸುಗಳ ಮತ್ತು ಎಮ್ಮೆಗಳ ಮಾರಣಹೋಮ ನಡೆದಿದೆ.

ಅನೇಕ ಹಸುಗಳನ್ನು ಕಡಿದು 450 ಕೆಜಿ ಯಷ್ಟು ಮಾಂಸವನ್ನು 2ಕೆಜಿ ಪ್ಯಾಕೆಟ್ ಗಳ ಮೂಲಕ ಮಾರಲು ಸಿದ್ದತೆ ನಡೆದಿತ್ತು. ಆದರೆ ಶನಿವಾರ ಪೊಲೀಸರು ಅಕ್ರಮ ಗೋವು ಮಾಂಸದ ಅಡ್ಡೆ ಮೇಲೆ ದಾಳಿ ನಡೆಸಿ 15 ಹಸು ಮತ್ತು 13 ಎಮ್ಮೆ ಹಾಗೂ ಅಪಾರ ಪ್ರಮಾಣದ ಮಾಂಸ ವಶಪಡಿಸಿಕೊಂಡಿದ್ದಾರೆ.

ಇಬ್ಬರು ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಿದ್ದು ಸ್ಥಳದಲ್ಲಿದ್ದ ಹಸುವಿನ ದಲ್ಲಾಳಿ ಗಳಾದ ಮಂಜುನಾಥ್ ಮತ್ತು ಶಿವು, ಹಸುಗಳ ಸಾಗಾಣಿಕೆ ಮಾಡುತ್ತಿದ್ದ ಟಾಟಾ ಎಸಿ ಚಾಲಕ ಬ್ಯಾಲಕೆರೆ ರೇವಂತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಮೃತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಕತ್ತರಿಸಿರುವ ಮಾಂಸವನ್ನು ಗೋಮಾಂಸ ಎಂದು ಖಚಿತಪಡಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಗೋಮಾಂಸ ನಿಷೇಧವಿದ್ದರೂ ಸಹ ಮಾರಣಹೋಮ ನಿರಂತರವಾಗಿ ನಡೆಯುತ್ತಿದ್ದು ಸರ್ಕಾರ ಇತ್ತ ಕಡೆ ಗಮನಹರಿಸಬೇಕಿದೆ.

Edited By :
PublicNext

PublicNext

09/07/2022 08:24 pm

Cinque Terre

37.78 K

Cinque Terre

4

ಸಂಬಂಧಿತ ಸುದ್ದಿ