ತಮಿಳುನಾಡು: ವಿಚ್ಛೇದಿತ ವ್ಯಕ್ತಿಯೊಬ್ಬ ಎರಡನೇ ಮದುವೆಗೆ ಹುಡುಗಿ ಹುಡುಕುತ್ತಿದ್ದ,ಆದರೆ, ಈ ವ್ಯಕ್ತಿಗೆ ಈಗ ಮೋಸ ಆಗಿದ್ದು, ನಾನು 30 ವರ್ಷದವಳು ಎಂದು 54ರ ಮಹಿಳೆಯೊಬ್ಬಳು ಮದುವೆಯಾಗಿ ಮೋಸ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಹೌದು. 54 ವರ್ಷದ ಶರಣ್ಯ ಎಂಬ ವಯಸ್ಕ ಮಹಿಳೆನೇ ಮೋಸ ಮಾಡಿದ್ದಾಳೆ. ತಿರುವಳ್ಳೂರು ಜಿಲ್ಲೆಯ ಪುದುಪೆಟ್ಟೈನ ಮೂಲದ ವಿಚ್ಛೇದಿತ 35 ವರ್ಷದ ವ್ಯಕ್ತಿ ಇಲ್ಲಿಯ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದನು. ಈ ವ್ಯಕ್ತಿಯ ಅಮ್ಮ ಇಂದ್ರಾಣಿನೇ ಮಗನ ಮದುವೆಗೆ ಶರಣ್ಯಾಳರನ್ನ ಫೈನಲ್ ಮಾಡಿದ್ದರು.
ಆದರೆ, ಶರಣ್ಯ ಬ್ಯೂಟಿಪಾರ್ಲ್‌ಗೆ ಹೋಗಿ 30 ರ ಹರೆದ ಹುಡುಗಿ ಹಾಗೇನೆ ರೆಡಿಯಾಗಿ ಬಂದಿದ್ದಳು. ಎಲ್ಲವೂ ಓಕೆ ಅನಿಸಿದ ಮೇಲೇನೆ ಇಂದ್ರಾಣಿ ಮಗನ ಮದುವೆ ಮಾಡಿಸಿದ್ದಾಳೆ.
ಆದರೆ, ಅಸಲಿ ಸತ್ಯ ತಿಳಿದ್ದು ಯಾವಾಗ ಗೊತ್ತೇ ? ಹೌದು. ಯಾವಾಗ 35 ವರ್ಷದ ವ್ಯಕ್ತಿ ತನ್ನ ಹೆಂಡತಿಯ ಹೆಸರಲ್ಲಿ ಆಸ್ತಿ ವರ್ಗಾಯಿಸಲು ಹೋದಗಲೇ ಎಲ್ಲವೂ ಹೊರ ಬಿದ್ದಿದೆ. ಶರಣ್ಯ ಆಧಾರ್ ಕಾರ್ಡ್ ನಿಂದಲೇ ಎಲ್ಲ ಸತ್ಯ ಹೊರ ಬಂದಿದೆ. ಶರಣ್ಯಗೆ ರವಿ ಎಂಬೋರ ಜೊತೆಗೆ ಮದುವೆ. ಎರಡು ಮಕ್ಕಳು ಇದ್ದು ಇವರಿಗೂ ಮದುವೆ ಆಗಿರೋ ಸತ್ಯ ಹೊರ ಬಿದ್ದಿದೆ.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಪುತ್ತೂರಿನ ಶರಣ್ಯ ಮೂಲ ಹೆಸರು ಸಂಧ್ಯಾ ಅಲಿಯಾಸ್, ಸುಕನ್ಯಾ ಅಲಿಯಾಸ್ ಸಂಧ್ಯಾ ಹೀಗೆ ಹಲವು ನಾಮಗಳಿಂದಲೇ ಈ ಮೊದಲು ಸುಬ್ರಮಣ್ಯ ಎಂಬುವ ವ್ಯಕ್ತಿಯನ್ನ ಮದುವೆ ಆಗಿದ್ದಳು. 11 ವರ್ಷ ಜೀವನ ಸಾಗಿಸಿದ್ದಳು. ಕೋವಿಡ್ ಸಮಯದಲ್ಲಿ ಆತನನ್ನ ಬಿಟ್ಟು ತಾಯಿ ಮನೆಯಲ್ಲಿಯೇ ಶರಣ್ಯ ಇದ್ದಳು. ಆರ್ಥಿಕ ಸಂಷ್ಟಕ್ಕೂ ಒಳಗಾಗಿ ಮತ್ತೊಂದು ಮದುವೆಗೆ ಪ್ಲಾನ್ ಮಾಡಿ ಈಗ ಸಿಕ್ಕಿ ಹಾಕಿಕೊಂಡಿದ್ದಾಳೆ.
PublicNext
06/07/2022 05:07 pm