ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐದು ವರ್ಷದ ಮಗುವನ್ನ ಮನಬಂದಂತೆ ಥಳಿಸಿದ ಮಾಸ್ತರ್-ವೀಡಿಯೋ ವೈರಲ್!

ಪಾಟ್ನಾ: ಬಿಹಾರದ ಕೋಚಿಂಗ್ ಸೆಂಟರ್‌ ನ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನ ಮನಸೋಯಿಚ್ಛೆ ಥಳಿಸಿದ್ದಾರೆ. ಈ ಒಂದು ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

ಜಯಾ ಕೋಚಿಂಗ್ ಸೆಂಟರ್‌ನ ಶಿಕ್ಷಕನ ಏಟಿಗೆ ವಿದ್ಯಾರ್ಥಿ ನಲುಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯಕ್ಕೆ ವಿದ್ಯಾರ್ಥಿಯನ್ನ ಆಸ್ಪತ್ರೆಗೂ ದಾಖಲಿಸಲಾಗಿದೆ.

ಬಿಹಾರ್ ರಾಜ್ಯದ ರಾಜಧಾನಿ ಪಾಟ್ನಾದ ಧನರುವಾ ಬ್ಲಾಕ್‌ ನಲ್ಲಿಯೇ ಈ ಒಂದು ಘಟನೆ ನಡೆದಿದ್ದು, ಐದು ವರ್ಷದ ಹುಡುಗ ಹೊಡೆದ ಏಟಿಗೆ ಅಳುತ್ತಿದ್ದರೂ ಶಿಕ್ಷಕ ಹೊಡೆಯೋದನ್ನ ನಿಲ್ಲಿಸಿಯೇ ಇಲ್ಲ. ಅಲ್ಲಿದ್ದ ಇತರ ಮಕ್ಕಳೂ ಅದನ್ನು ತಡೆಯಲು ಅಂಜುತ್ತಿದ್ದರು. ಅಂತಹ ಈ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪುಟ್ಟ ಹುಡುಗನಿಗೆ ಹೊಡದ ಶಿಕ್ಷಕಣ ಹೆಸರು ಛೋಟು ಎಂದು ಹೇಳಲಾಗಿದ್ದು, ಅಧಿಕ ರಕ್ತದೊತ್ತಡದಿಂದಲೇ ಈ ರೀತಿ ಮಾಡಿದ್ದಾನೆ ಎಂದು ಕೋಚಿಂಗ್ ಸೆಂಟರ್‌ನ ಮಾಲೀಕ ಅಮರಕಾಂತ್ ಕುಮಾರ್ ಹೇಳಿದ್ದಾರೆ. ಹುಡುಗನನ್ನ ಹೊಡೆದಿದ್ದಕ್ಕೆ ಸ್ಥಳೀಯರು ಮಾಸ್ತರ್‌ನನ್ನ ಸರಿಯಾಗಿಯೇ ಥಳಿಸಿದ್ದಾರೆ.

Edited By :
PublicNext

PublicNext

04/07/2022 11:01 pm

Cinque Terre

129.13 K

Cinque Terre

28

ಸಂಬಂಧಿತ ಸುದ್ದಿ