ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೈಲರ್ ಕನ್ಹಯ್ಯ ಲಾಲ್ ಹತ್ಯೆ-ಪತ್ನಿ ಯಶೋದಾ ಹೇಳಿದ ಆ ಸತ್ಯ !

ಉದಯಪುರ: ಹಿಂದೂ ವ್ಯಕ್ತಿ ಕನ್ಹಯ್ಯ ಲಾಲ್ ಹತ್ಯೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿಬಿಟ್ಟಿದೆ. ಆದರೆ, ಅಂದು ನಿಜವಾಗಲು ಏನೆಲ್ಲ ನಡೆದಿತ್ತು ಅನ್ನೋ ಅಸಲಿ ಸತ್ಯವನ್ನ ಮೃತ ಕನ್ಹಯ್ಯ ಪತ್ನಿ ಯಶೋದ ಈಗ ಎಳೆ ಎಳೆಯಾಗಿ ಹೇಳಿಕೊಂಡಿದ್ದಾರೆ.

ಹೌದು. ಅಂದು ನನ್ನ ಪತಿ ಅಂಗಡಿಯಲ್ಲಿಯೇ ಇದ್ದರು. ಗ್ರಾಹಕರ ಸೋಗಿನಲ್ಲಿ ಇಬ್ಬರು ಬಂದರು. ಅವರಲ್ಲಿ ಒಬ್ಬನ ಅಳತೆಯನ್ನ ನನ್ನ ಪತಿ ತೆಗೆದುಕೊಳ್ಳುತ್ತಿದ್ದರು. ಆದರೆ, ಇದೇ ಸಮಯದಲ್ಲಿಯೇ ಹರಿತವಾದ ಆಯುಧದಿಂದಲೇ ನನ್ನ ಪತಿ ಮೇಲೆ ಹಲ್ಲೆ ಮಾಡಲಾಯಿತು. ಆ ದೃಶ್ಯವನ್ನ ಮತ್ತೊಬ್ಬ ಸೆರೆಹಿಡಿಯತ್ತಿದ್ದ ಅಂತಲೇ ಯಶೋದಾ ವಿವರಿಸಿದ್ದಾರೆ.

ನೂಪುರ ಶರ್ಮಾ ಪರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ಮೇಲೆ ನನ್ನ ಪತಿಯನ್ನ ಪೊಲೀಸರು ಜೂನ-10 ರಂದು ಅರೆಸ್ಟ್ ಮಾಡಿದ್ದರು. ಜೂನ್-15 ರಂದು ಜಾಮೀನ ಮೇಲೆ ಪತಿಯನ್ನ ಬಿಡಿಸಿಕೊಂಡು ಬಂದೇವು. ಆದರೆ, ಆಗ ಅನೇಕ ಬೆದರಿಕೆ ಕರೆಗಳೂ ಬರ್ತಾ ಇದ್ದವು. ಅದಕ್ಕೇನೆ ನನ್ನ ಪತಿ ಪ್ರತಿ ದಿನ ಅಂಗಡಿಗೆ ಹೋಗಿರಲಿಲ್ಲ. ಹೋದರು ಕೆಲವು ಗಂಟೆ ಕೆಲಸ ಮಾಡಿ ವಾಪಸ್ ಆಗುತ್ತಿದ್ರು ಎಂದು ಯಶೋದಾ ಅಳಲು ತೋಡಿಕೊಂಡಿದ್ದಾರೆ.

ಜೈಲಿನಿಂದ ಬಂದ್ಮೇಲೆ ನೆರೆ-ಹೊರೆಯವರು ಕೂಡ ನಮಗೆ ಬೆದರಿಸಿದರು. ಈ ಕಾರಣಕ್ಕೇನೆ ಪೊಲೀಸ್ ಠಾಣೆಗೂ ದೂರು ಕೊಟ್ಟೇವು. ಆದರೆ, ಈಗ ನೋಡಿದ್ರೆ ಹೀಗೆ ಆಗಿದೆ ಅಂತಲೇ ಯಶೋದಾ ತಮ್ಮ ನೋವನ್ನ ಹೇಳಿಕೊಂಡಿದ್ದಾರೆ.

Edited By :
PublicNext

PublicNext

29/06/2022 01:55 pm

Cinque Terre

54.05 K

Cinque Terre

5

ಸಂಬಂಧಿತ ಸುದ್ದಿ