ಜೈಪುರ್: ಬಿಜೆಪಿಯ ಮಾಜಿ ವಕ್ತಾರೆ ನೂಪುರ ಶರ್ಮಾ ಹೇಳಿಕೆ ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯ್‌ಪುರದಲ್ಲಿ ಟೈಲರ್‌ನನ್ನು ಬರ್ಬರ ಹತ್ಯೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಹಂತಕರು ಕೃತ್ಯದ ನಂತರ ವಿಡಿಯೋವನ್ನು ಪೋಸ್ಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ.
40 ವರ್ಷದ ಕನ್ಹಯ್ಯಾಲಾಲ್ ತೇಲಿ ಅವರು ಧನ್ಮಂಡಿಯಲ್ಲಿರುವ ಭೂತಮಹಲ್ ಬಳಿ ಸುಪ್ರೀಂ ಟೈಲರ್ಸ್ ಹೆಸರಿನ ಅಂಗಡಿ ನಡೆಸುತ್ತಿದ್ದರು. ಮಂಗಳವಾರ ಮಧ್ಯಾಹ್ನ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಅಂಗಡಿಗೆ ನುಗ್ಗಿದ್ದಾರೆ. ಕನ್ಹಯ್ಯಾಲಾಲ್‌ಗೆ ಏನೂ ಅಂತ ಅರ್ಥವಾಗುವಷ್ಟರಲ್ಲಿ ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ದಾಳಿ ನಡೆಸಿದ್ದಾರೆ. ಒಂದರ ನಂತರ ಒಂದರಂತೆ, ಅವರು ಅರ್ಧ ಡಜನ್‌ಗಿಂತಲೂ ಹೆಚ್ಚು ಬಾರಿ ಮೇಲೆ ದಾಳಿ ಮಾಡಿದರು. ತೇಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೃತ್ಯದ ಬಳಿಕ ಇಬ್ಬರೂ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳಿಕ ಪ್ರಧಾನಿ ಮೋದಿಯನ್ನು ಹತ್ಯೆ ಮಾಡುತ್ತೇವೆ ಎಂದು ಚಾಕು ಹಿಡಿದು ವಿಡಿಯೋ ಮಾಡಿ, 'ಶೀಘ್ರದಲ್ಲೇ ನಿಮ್ಮ ಕುತ್ತಿಗೆವರೆಗೂ ಈ ಕತ್ತಿ ಬರಲಿದೆ' ಎಂದು ಬೆದರಿಕೆ ಒಡ್ಡಿದ್ದಾರೆ.
ಆರೋಪಿಗಳು ಉದಯ್‌ಪುರ ಮೂಲದವರಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
PublicNext
28/06/2022 07:59 pm