ಚಂಡೀಗಢ: ಪಂಜಾಬ್‌ನ ಪಠಾಣ್‌ಕೋಟ್‌ನ ಮಿರ್ಥಾಲ್ ಕಂಟೋನ್ಮೆಂಟ್‌ನಲ್ಲಿ 22 ವರ್ಷದ ಭಾರತೀಯ ಸೇನಾ ಯೋಧ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದಿದ್ದಾನೆ.
ಸೋಮವಾರ ಮುಂಜಾನೆ 2:30ರ ಸುಮಾರಿಗೆ ಮಿರ್ಥಾಲ್‌ನಲ್ಲಿರುವ 15ನೇ ಗಾರ್ಡ್ ಸೇನಾ ಸಂಕೀರ್ಣದಲ್ಲಿ ಸೇನಾ ಸಿಬ್ಬಂದಿ ನಡುವೆ ಸಣ್ಣದಾಗಿ ಮಾತಿನ ಚಕಮಕಿ ಆರಂಭವಾಗಿತ್ತು. ಮಾತುಕತೆ ವಿಕೋಪಕ್ಕೆ ತಿರುಗಿದ ನಂತರ ಸಹೋದ್ಯೋಗಿಯೊಬ್ಬರು ಗುಂಡಿಕ್ಕಿ ಇಬ್ಬರು ಸೈನಿಕರನ್ನು ಕೊಂದಿದ್ದಾರೆ.
ಗುಂಡು ಹಾರಿಸಿದ ಸಿಪಾಯಿಯನ್ನು ಜಾರ್ಖಂಡ್ ಮೂಲದ 22 ವರ್ಷ ವಯಸ್ಸಿನ ಲೋಕೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದ ಗೌರಿ ಶಂಕರ್ ಮತ್ತು ಮಹಾರಾಷ್ಟ್ರದ ಸೂರ್ಯಕಾಂತ್ ಅವರನ್ನು ಲೋಕೇಶ್ ಅವರು INSAS ರೈಫಲ್‌ನಿಂದ ಗುಂಡಿಕ್ಕಿ ಕೊಂದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಕಂಟೋನ್ಮೆಂಟ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಸಿಕ್ಕಿಬಿದ್ದಿದ್ದಾನೆ.
PublicNext
28/06/2022 02:50 pm