ರಾಂಚಿ: ಅಲ್ಲಲ್ಲಿ ವಾಮಾಚಾರಕ್ಕೆ ಕೊಲೆ ಮಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ ಆದ್ರೆ ಇಲ್ಲಿ ಮಹಿಳೆಯೋರ್ವಳನನ್ನು ಆಕೆಯ ಪತಿಯ ಎದುರೆ ಭೀಕರವಾಗಿ ಕೊಲೆ ಮಾಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ. ಹೌದು ಮೃತ ಮಹಿಳೆ ಅಕ್ಕ ಹಾಗೂ ಬಾವನೇ ಹೀಗೆ ವಿಚಿತ್ರವಾಗಿ ಬಲಿಕೊಟ್ಟ ಭೀಕರ ಕೃತ್ಯ ವೆಸಗಿದ್ದಾರೆ.
ಮಹಿಳೆಯನ್ನು ಗುಡಿಯಾ ದೇವಿ(26) ಎಂದು ಗುರುತಿಸಲಾಗಿದೆ. ಈ ಘಟನೆ ಜಾರ್ಖಂಡ್ ನ ಗರ್ವಾ ಜಿಲ್ಲೆಯಲ್ಲಿ ಜೂನ್ 21 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ.
ವಾಮಾಚಾರಕ್ಕೆ ಸಹೋದರಿಯನ್ನೇ ಬಲಿಕೊಟ್ಟ ಪಾಪಿ ಅಕ್ಕ :
ಗುಡಿಯಾಳ ಅಕ್ಕ ಹಾಗೂ ಬಾವ ತಂತ್ರ ಸಿದ್ಧಿಗಾಗಿ ಪೂಜೆ ಪುನಸ್ಕಾರವನ್ನು ಆಯೋಜಿಸಿದ್ದರು. ಈ ವೇಳೆ ತಂತ್ರ ವಿದ್ಯೆಗೆ ಮಹಿಳೆಯನ್ನು ಬಲಿಕೊಡಬೇಕು ಎಂದು ಮಂತ್ರವಾದಿ ಹೇಳಿದ್ದಾನೆ. ಹೀಗಾಗಿ ಗುಡಿಯಾ ದೇವಿಯನ್ನು ವಾಮಾಚಾರಕ್ಕೆ ಬಲಿ ಕೊಡಲು ಆಕೆಯ ಅಕ್ಕ ಹಾಗೂ ಬಾವ ನಿರ್ಧರಿಸಿದ್ದಾರೆ.
ಅದರಂತೆ ಆಕೆಯನ್ನು ಮಂತ್ರವಾದಿಯ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಂತ್ರವಾದಿ ಗುಡಿಯಾಳಿಗೆ ಕೋಲಿನಿಂದ ಚೆನ್ನಾಗಿ ಥಳಿಸಿದ್ದಾನೆ. ಪರಿಣಾಮ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ಈ ವೇಳೆ ಮೂವರು ಸೇರಿ ಗುಡಿಯಾಳನ್ನು ಅರೆನಗ್ನಗೊಳಿಸಿ ಮೊದಲು ನಾಲಿಗೆಯನ್ನು ಕತ್ತರಿಸಿದ್ದಾರೆ. ನಂತರ ಗುಡಿಯಾ ಖಾಸಗಿ ಅಂಗವನ್ನು ಕತ್ತರಿಸಿ ಕೈ ಹಾಕಿ ಕರುಳು ಕಿತ್ತು ಹೊರತೆಗೆದಿದ್ದಾರೆ. ಈ ಮೂಲಕ ವಾಮಾಚಾರ ಮಾಡಿದ್ದಾರೆ. ಭೀಕರ ಕೃತ್ಯದಿಂದ ಗುಡಿಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಇಷ್ಟೆಲ್ಲಾ ಆದ ಬಳಿಕ ಆರೋಪಿಗಳು ಗುಡಿಯಾ ಶವವನ್ನು ಕಾಡಿನಲ್ಲಿ ಸುಟ್ಟು ಹಾಕಿ ಪರಾರಿಯಾಗಿದ್ದಾರೆ. ಇದೀಗ ಕೃತ್ಯ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿಯ ಸಹೋದರಿ ಮತ್ತು ಸೋದರ ಮಾವ ಸೇರಿದಂತೆ ಎಲ್ಲರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
PublicNext
27/06/2022 07:32 pm