ಆಗ್ರಾ: ಇಲ್ಲಿಯ 30 ವರ್ಷದ ಮಹಿಳೆಯನ್ನ ಆಯಕೆ ಪತಿ ಮತ್ತು ನಾಲ್ವರು ಸೇರಿ ಆಕೆ ಕೈಗಳನ್ನ ಕಟ್ಟಿ ನಾಲ್ಕನೆ ಮಹಡಿಯಿಂದ ಎಸೆದು ಕೊಂದಿರೋ ಘಟನೆ ಆಗ್ರಾದಲ್ಲಿ ನಡೆದಿದೆ.
ಮೃತಳನ್ನ ರಿತಿಕಾ ಸಿಂಗ್ ಎಂದು ಗುರುತಿಸಲಾಗಿದೆ.ಈಕೆ ತನ್ನ ಪತ್ನಿಯಿಂದ ಬೇರ್ಪಟ್ಟಿದ್ದಳು. ಫೇಸ್‌ಬುಕ್ ನಲ್ಲಿ ಪರಿಚಯವಾದ ಸ್ನೇಹಿತನೊಂದಿಗೆ ತಾಜ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರೊ ಬರೋ ಮನೆಯಲ್ಲಿಯೇ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಪತಿ ಆಕಾಶ್ ಗೌತಮ್ ಸೇರಿದಂತೆ ಇನ್ನೂ ಮೂವರನ್ನ ಪೊಲೀಸರು ಈಗ ಬಂಧಿಸಿದ್ದಾರೆ. ಭಾರತೀಯ ದಂಡ ಸಂಹಿತೆ 302 ಮತ್ತು 34 ಅಡಿ ಪ್ರಕರಣ ದಾಖಲಿಸಿರೋದಾಗಿ ಪೊಲೀಸರು ಹೇಳಿದ್ದಾರೆ.
ನಿನ್ನೆ 24.6.2022 ರಂದು ನಡೆದ ಈ ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಕೂಡ ಸೆರೆ ಆಗಿದೆ.
PublicNext
25/06/2022 09:38 pm