ನವದೆಹಲಿ: ರೈಲ್ವೇ ಸಿಬ್ಬಂದಿಯೊಬ್ಬರು ಜೀವದ ಹಂಗು ತೊರೆದು ಪ್ರಯಾಣಿಕನೊಬ್ಬನ ಪ್ರಾಣ ಉಳಿಸಿದ್ದಾರೆ. ಈ ವಿಡಿಯೋವನ್ನು ರೈಲ್ವೇ ಸಚಿವಾಲಯ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.
ರೈಲ್ವೇ ಸಿಬ್ಬಂದಿ ಎಚ್.ಸತೀಶ್ ಕುಮಾರ್ ಅವರು ಗೂಡ್ಸ್ ರೈಲು ಬರುತ್ತಿದ್ದ ಹಿನ್ನೆಲೆಯಲ್ಲಿ ಫ್ಲ್ಯಾಗ್ ಹಿಡಿದು ಪ್ಲಾಟ್‌ಫಾರ್ಮ್‌ಗೆ ಬಂದು ನಿಂತಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ರೈಲು ಹಳಿಯ ಮೇಲೆ ಬಿದ್ದಿದ್ದರು. ಇನ್ನು ಅದೇ ಟ್ರ್ಯಾಕ್ ಮೇಲೆ ರೈಲು ಬರುತ್ತಿರುವುದನ್ನು ಗಮನಿಸಿದ ರೈಲ್ವೇ ಸಿಬ್ಬಂದಿ ಎಚ್.ಸತೀಶ್ ಕುಮಾರ್ ಅವರು ಓಡಿ ಹೋಗಿ ತಮ್ಮ ಕೈಯಲ್ಲಿದ್ದ ಫ್ಲ್ಯಾಗ್‌ಗಳನ್ನು ಕೈಬಿಟ್ಟು ಟ್ರ್ಯಾಕ್ ಮೇಲೆ ಜಿಗಿದು ಪ್ರಯಾಣಿಕನನ್ನು ರಕ್ಷಿಸಿದ್ದಾರೆ.
ಈ ವಿಡಿಯೋ ಟ್ವೀಟ್ ಮಾಡಿರುವ ರೈಲ್ವೇ ಸಚಿವಾಲಯವು, 'ಎಚ್.ಸತೀಶ್ ಕುಮಾರ್ ಅವರು ಧೈರ್ಯದಿಂದ ಅಮೂಲ್ಯ ಜೀವವನ್ನು ಉಳಿಸಿದ್ದಾರೆ. ಭಾರತೀಯ ರೈಲ್ವೇಯು ಎಚ್. ಸತೀಶ್ ಕುಮಾರ್ ಅವರಂತಹ ಧೈರ್ಯಶಾಲಿ ಮತ್ತು ಪರಿಶ್ರಮಿ ಸಿಬ್ಬಂದಿಯನ್ನು ಹೊಂದಲು ಹೆಮ್ಮೆಪಡುತ್ತದೆ ಮತ್ತು ಅವರ ಧೈರ್ಯವನ್ನು ಶ್ಲಾಘಿಸುತ್ತದೆ' ಎಂದು ಬರೆದುಕೊಂಡಿದೆ.
PublicNext
24/06/2022 10:06 pm