ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುವಾಗ ಪತ್ನಿಗೆ ಮುತ್ತು ಕೊಟ್ಟಿದ್ದಲ್ಲದೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯನ್ನು ಸ್ಥಳದಲ್ಲಿದ್ದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವ್ಯಕ್ತಿಯು ಪತ್ನಿಯ ಜೊತೆಗೆ ನದಿಯಲ್ಲಿ ಸ್ನಾನ ಮಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿರುತ್ತಾನೆ. ಈ ವೇಳೆ ಇದನ್ನು ಗಮನಿಸಿದ ಕೆಲ ಯುವಕರು ನಿಧಾನವಾಗಿ ಅವರನ್ನು ಸುತ್ತುವರೆಯುತ್ತಾರೆ. ಆಗಲೂ ಆ ವ್ಯಕ್ತಿಯ ಪತ್ನಿಗೆ ಮುತ್ತಿಡಲು ಹೋಗುತ್ತಾನೆ. ಇದರಿಂದ ಕೆರಳಿದ ಜನರು ಆತನನ್ನು ನದಿಯಿಂದ ಹೊರಗೆ ಎಳೆದು ತರುತ್ತಾರೆ. ಈ ಮಧ್ಯೆ ಮಹಿಳೆ ತನ್ನ ಪ್ಯಾಂಟ್ ಹಾಕಿಕೊಳ್ಳಲು ಹೆಣಗಾಡುತ್ತಾಳೆ. ಅಷ್ಟೊತ್ತಿಗೆ ಜನರು ವ್ಯಕ್ತಿಯನ್ನು ಹೊರಗೆ ಎಳೆದು ತಂದು ಧರ್ಮದೇಟು ಕೊಡುತ್ತಾರೆ. ಹೆಂಡತಿ ತನ್ನ ಗಂಡನನ್ನು ರಕ್ಷಿಸಲು ಪ್ರಯತ್ನಿಸಿ ವಿಫಲಳಾಗುತ್ತಾಳೆ.
ಅಯೋಧ್ಯೆಯಲ್ಲಿ ಇಂತಹ ಅಸಭ್ಯತೆಯನ್ನು ಸಹಿಸುವುದಿಲ್ಲ ಎಂದು ಸ್ಥಳದಲ್ಲಿದ್ದ ವ್ಯಕ್ತಿಯೋರ್ವ ಹೇಳುತ್ತಿರುವುದನ್ನು ವಿಡಿಯೋ ಕೇಳಬಹುದಾಗಿದೆ. ದಂಪತಿಯ ಈ ವರ್ತನೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
PublicNext
23/06/2022 12:16 pm