ಬೆಂಗಳೂರು: ಪಾಕಿಸ್ತಾನ್ ಇಂಟೆಲಿಜೆನ್ಸ್ ನಿಂದ ಡಿಫೆನ್ಸ್ ಮಾಹಿತಿಗಾಗಿ ಡಾರ್ಕ್ ಕಾಲ್ ಮಾಡುತ್ತಿದ್ದ ಬಗ್ಗೆ ಇಂಡಿಯನ್ ಮಿಲಿಟರಿ ಮಾಹಿತಿ ಕಲೆ ಹಾಕಿದೆ. ಇಂಟರ್‌ನ್ಯಾಷನಲ್ ಕಾಲ್‌ಗಳನ್ನ ಲೋಕಲ್ ಆಗಿ ಕನ್ವರ್ಟ್ ಮಾಡುತ್ತಿದ್ದ ಜಾಲವನ್ನು ಮಿಲಿಟರಿ ಇಂಟಲಿಜೆನ್ಸ್ ಭೇದಿಸಿದೆ.
ಪಾಕಿಸ್ತಾನದ ಇಂಟಲಿಜೆನ್ಸ್ ಕಾಲ್‌ಗಳನ್ನ ಅನಧಿಕೃತ ಸಿಮ್ ಬಾಕ್ಸ್ ಮೂಲಕ ಲೋಕಲ್ ಕಾಲ್‌ಗಳಾಗಿ ಕನ್ವರ್ಟ್ ಮಾಡ್ತಿದ್ದ ಗ್ಯಾಂಗ್ ಬಲೆಗೆ ಬಿದ್ದಿದ್ದು, 58 ಸಿಮ್ ಬಾಕ್ಸ್‌ಗಳ ಮೂಲಕ 2,144 ಸಿಮ್ ಬಳಸಿ ಕಾಲ್ ಕನ್ವರ್ಟ್ ಮಾಡಲಾಗುತ್ತಿತ್ತು.
ಇದೇ ಗ್ಯಾಂಗ್‌ನ ಜಾಲವನ್ನು ಬಳಸಿಕೊಂಡು ಭಾರತೀಯ ಸೇನೆಯ ಮಾಹಿತಿ ಪಡೆಯಲು ಪಾಕಿಸ್ತಾನದ ಇಂಟಲಿಜೆನ್ಸ್ ನಿಂದ ಸಹ ಕರೆ ಬಂದಿರೋದನ್ನ ಮಿಲಿಟರಿ ತನಿಖಾ ಏಜೆನ್ಸಿ ಪತ್ತೆ ಮಾಡಿದೆ. ಖಚಿತ ಮಾಹಿತಿ ಮೇರೆಗೆ ಕೇರಳದ ವಯನಾಡ್ ಮೂಲದ ಶರಾಫುದ್ದೀನ್ ಬಂಧನವಾಗಿದ್ದು, ಆರೋಪಿ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಸಿಮ್ ಬಾಕ್ಸ್ ಇಟ್ಟಿದ್ದ. ಭುವನೇಶ್ವರಿನಗರ, ಚಿಕ್ಕಸಂದ್ರ, ಸಿದ್ದೇಶ್ವರ ಲೇಔಟ್ ಸೇರಿದಂತೆ ನಾಲ್ಕು ಕಡೆ ಸಿಮ್ ಬಾಕ್ಸ್ ಇಟ್ಟು ಈ ಅಕ್ರಮ ನಡೆಸುತ್ತಿದ್ದ.
ಸದ್ಯ ಈ ನಕಲಿ ಅಡ್ಡೆ ರೇಡ್ ನಡೆಸಿ 58 ಸಿಮ್ ಬಾಕ್ಸ್, ಮತ್ತು 2144 ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ಬೆಂಗಳೂರು ಸೌತರ್ನ್ ಕಮ್ಯಾಂಡ್ ಟೀಂ ಮತ್ತು ಸಿಸಿಬಿ ಸೀಜ್ ಮಾಡಿದ್ದಾರೆ.
PublicNext
21/06/2022 01:43 pm