ಹೈದರಾಬಾದ್ : ಅವರೆಲ್ಲ ಸ್ನೇಹಿತರು ಆದ್ರೆ ಈಗ ಈ ಸ್ನೇಹಿತರೆ ತಮ್ಮ ಸ್ನೇಹಿತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದಿದೆ.ಹೌದು 28 ವರ್ಷದ ಯುವತಿ ಬರ್ತ್ ಡೇ ಪಾರ್ಟಿ ಮುಗಿಸಿ ಪಬ್ ನಿಂದ ಮನೆಗೆ ಹಿಂದಿರುಗಿದ ವೇಳೆ ಆಕೆಯ ಸ್ನೇಹಿತರೇ ಅತ್ಯಾಚಾರ ಎಸಗಿದ್ದಾರೆ.
ಆರೋಪಿಗಳು ಸಂತ್ರಸ್ತೆಯನ್ನು ಬರ್ತ್ ಡೇ ಪಾರ್ಟಿಗೆಂದು ಜುಬಿಲಿ ಹಿಲ್ಸ್ ನ ಪಬ್ ಗೆ ಆಹ್ವಾನಿಸಿದ್ದಾರೆ. ಪಾರ್ಟಿ ಬಳಿಕ ರಾತ್ರಿ 11.30ರ ಸುಮಾರಿಗೆ ಡ್ರಾಪ್ ಮಾಡುವ ನೆಪದಲ್ಲಿ ಆಕೆಯ ಮನೆಗೆ ಸ್ನೇಹಿತರು ಹೋಗಿದ್ದಾರೆ. ನಂತರ ಮಂಗಳವಾರ ಬೆಳಗಿನ ಜಾವ 4.30ರವರೆಗೂ ಮೂವರು ಹರಟೆ ಹೊಡೆದು, ಬಳಿಕ ಇಬ್ಬರು ಸ್ನೇಹಿತರು ಮನೆಯಿಂದ ಹೊರಟ್ಟಿದ್ದಾರೆ.
ಯುವತಿ ಮೇಲೆ ಬಲವಂತವಾಗಿ ಆಕೆಯ ಸ್ನೇಹಿತರು ಅತ್ಯಾಚಾರ ನಡೆಸುತ್ತಿದ್ದಂತೆ ಯುವತಿ ಕೂಗಾಡಲು ಆರಂಭಿಸಿದ್ದಾರೆ. ಈ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇದೀಗ ಬುಧವಾರ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಬಾಚುಪಲ್ಲಿ ಪೊಲೀಸರು ಆಕೆಯ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.
PublicNext
17/06/2022 05:06 pm