ಪಟನಾ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ಅಕ್ಷರಶಃ ಅಗ್ನಿಕುಂಡವೇ ಆಗಿ ಬಿಟ್ಟಿದೆ. ಬಿಹಾರದಲ್ಲಿ ಈ ಯೋಜನೆ ವಿರೋಧಿಸಿ ತೀವ್ರ ಪ್ರತಿಭಟನೆ ನಡೀತಾನೇ ಇದೆ. ಇಂದೂ ಅದು ಮುಂದುವರೆದಿದ್ದು,ಪ್ರತಿಭಟನಾಕಾರರು ಬಿಹಾರದ ಉಪಮುಖ್ಯಮಂತ್ರಿ ಮನೆ ಮೇಲೂ ದಾಳಿ ಮಾಡಿದ್ದಾರೆ.
ಹೌದು. ಸೇನಾ ಆಕ್ಷಾಂಕ್ಷಿಗಳ ಆಕ್ರೋಶ ಮುಗಿಲು ಮುಟ್ಟಿದೆ. ಇಂದು ಬೆಳಗ್ಗೇನು ಪ್ರತಿಭಟನಾಕಾರರು ರೈಲಿಗೆ ಬೆಂಕಿ ಇಟ್ಟಿದ್ದಾರೆ. ಅಷ್ಟೇ ಅಲ್ಲ, ಉಪಮುಖ್ಯಮಂತ್ರಿ ರೇಣು ದೇವಿ ಮನೆ ಮೇಲೂ ದಾಳಿ ನಡೆಸಿ ಬಿಟ್ಟಿದ್ದಾರೆ.
ಇನ್ನು ಉದ್ರಿಕ್ತ ಸೇನಾ ಆಕ್ಷಾಂಕ್ಷಿಗಳು ರೈಲಿಗೆ ಬೆಂಕಿ ಇಡೋದಲ್ಲದೇ,ರೈಲ್ವೆ ನಿಲ್ದಾಣದ ಆಸ್ತಿಯನ್ನು ಕೂಡ ಹಾನಿ ಮಾಡಿದ್ದಾರೆ.
PublicNext
17/06/2022 02:13 pm