ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಡ್ಯ: ಒಂಟಿ ಮಹಿಳೆಯನ್ನ ಬರ್ಬರವಾಗಿ ಕೊಂದ ಪಾಪಿಗಳು- ರೇಪ್ ಶಂಕೆ

ಮಂಡ್ಯ: ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಕೆ.ಆರ್​ ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ.

ಕಿಕ್ಕೇರಿ ಗ್ರಾಮದ ನಿವಾಸಿ ಒಂಟಿ ಮಹಿಳೆ ಪುಷ್ಪಲತಾ (45) ಮನೆಗೆ ಅಪರಿಚಿತರು ನುಗ್ಗಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಪುಷ್ಪಲತಾ ಅವರ ಪತಿ ಕಳೆದ 10 ವರ್ಷದ ಹಿಂದೆ ಮೃತಪಟ್ಟಿದ್ದರು. ಅದಕ್ಕೆ ಒಂಟಿಯಾಗಿಯೇ ಪುಷ್ಪಲತಾ ತಮ್ಮ ಮಗನನ್ನು ನೋಡಿಕೊಂಡು ಜೀವನ ನಡೆಸುತ್ತಿದ್ದರು.

ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ಪುಷ್ಪಲತಾ ಅವರು ನಿನ್ನೆ ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಿದಾಗ ಕೊಲೆ ಮಾಡಲಾಗಿದೆ. ತಾಯಿ ಮನೆಗೆ ತೆರಳಿ ಎಷ್ಟೊತ್ತಾದರೂ ಮೆಡಿಕಲ್ ಸ್ಟೋರ್​ಗೆ ವಾಪಸ್ ಬಾರದ ಹಿನ್ನಲೆಯಲ್ಲಿ ಪುಷ್ಪಲತಾ ಅವರ ಪುತ್ರ ಮನೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಲೆಗೆ ಹಾಗೂ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.

ಹಂತಕರು ಪುಷ್ಪಲತಾ ತಲೆ ಹಾಗೂ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಅಲ್ಲದೇ ಪುಷ್ಪಲತಾ ಮೃತದೇಹ ಅರ್ಧಂಬರ್ಧ ಬಟ್ಟೆಯಲ್ಲಿ ಪತ್ತೆಯಾಗಿರುವುದರಿಂದ ಆಕೆಯ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪುಷ್ಪಲತಾ ಅವರ ಕೊಲೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಸ್ಥಳಕ್ಕೆ ಕಿಕ್ಕೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳಿಗಾಗಿ ಶೋಧಕಾರ್ಯವನ್ನು ಪ್ರಾರಂಭಿಸಿದ್ದಾರೆ.

Edited By : Vijay Kumar
PublicNext

PublicNext

16/06/2022 12:45 pm

Cinque Terre

30.32 K

Cinque Terre

0

ಸಂಬಂಧಿತ ಸುದ್ದಿ