ಬೀದರ್: ಗಾಂಜಾ ರೇಡ್ ಮಾಡುವಾಗ ಇರಾಣಿ ಗ್ಯಾಂಗ್ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಬೀದರ್ ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಗಾಂಜಾ ಸಂಗ್ರಹಿಸಿಟ್ಟಿದ್ದ ಮಾಹಿತಿ ಪಡೆದ ಗಾಂಧಿ ಗಂಜ್ ಪೊಲೀಸರು ಇರಾಣಿ ಕಾಲೋನಿಗೆ ರೇಡ್ ಮಾಡಲು ತೆರಳಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಕಂಡ ಯುವಕರು ಗುಂಪು ಗುಂಪಾಗಿ ಪೊಲೀಸರ ಮೇಲೆ ಕಲ್ಲು ತೂರಾಡಿದ್ದಾರೆ.
ಇದರ ನಡುವೆಯೂ ಕಾಲೋನಿಗೆ ನುಗ್ಗಿದ ಪೊಲೀಸರು 5 ಕೆ.ಜಿಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಕೃತ್ಯದ ಸಿಸಿ ಕ್ಯಾಮೆರಾ ದೃಶ್ಯ ಈಗ ಬಹಿರಂಗವಾಗಿದೆ. ಕಲ್ಲು ತೂರಾಡಿದ ಪುಂಡರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
PublicNext
10/06/2022 10:40 pm