ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮೀನು ಮಾರಾಟಕ್ಕೆ ಒಪ್ಪದ ಪತ್ನಿ : ಮಡದಿ, ಮಕ್ಕಳಿಗೆ ವಿಷ ಹಾಕಿದ ಎಗ್ ರೈಸ್ ತಿನ್ನಿಸಿದ ಪಾಪಿ ಪತಿ

ವಿಜಯಪುರ : ಜಮೀನು ಮಾರಾಟಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಾಪಿ ಪತಿ ಮಡದಿ ಮತ್ತು ಮಕ್ಕಳಿಗೆ ವಿಷ ಹಾಕಿದ ಎಗ್ ರೈಸ್ ತಿನ್ನಿಸಿ ಹೀನ ಕೃತ್ಯ ಎಸಗಿದ್ದಾನೆ.ಇನ್ನು ಜೂನ್ 2 ರಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗೋನಾಳ ಎಸ್ ಎಚ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ವಿಷ ಬೆರಸಿದ ಎಗ್ ರೈಸ್ ತಿಂದ ಮಗ ಶಿವರಾಜ್ ಅರಸನಾಳ (2) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ರೆ, 5 ವರ್ಷದ ಮಗಳು ರೇಣುಕಾ ಪ್ರಾಣಾಪಾಯದಿಂದ ಪಾರಾಗಿದೆ.ಇನ್ನು ಕೈಗಡ ಸಾಲ ಮಾಡಿಕೊಂಡಿದ್ದ ಆರೋಪಿ ತಂದೆ ಚಂದ್ರಶೇಖರ್ ಸಾಲ ತೀರಿಸಲು ತಮ್ಮ ಪಾಲಿಗೆ ಬಂದಿದ್ದ ಜಮೀನು ಮಾರಾಟಕ್ಕೆ ಮುಂದಾದಾಗ ಪತ್ನಿ ವಿರೋಧ ವ್ಯಕ್ತಪಡಿಸಿ ಪತಿಯೊಂದಿಗೆ ಜಗಳಾಡಿ ಇಟಗಿ ಗ್ರಾಮದಿಂದ ತವರೂರು ಗೋನಾಳ ಎಸ್ ಎಚ್ ಗ್ರಾಮಕ್ಕೆ ತೆರಳಿದ್ದಳು.

ಜೂನ್ 2 ರಂದು ಚಂದ್ರಶೇಖರ್ ತನ್ನ ಸಂಬಂಧಿಕರನ್ನು ಗೋನಾಳಕ್ಕೆ ಕರೆದುಕೊಂಡು ಹೋಗಿ ಪತ್ನಿ ಸಾವಿತ್ರಿ ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಈ ವೇಳೆ ಪತ್ನಿ ಸಾವಿತ್ರಿ ಜಮೀನು ಮಾರಾಟ ಮಾಡೋದು ಬೇಡಾ ದುಡಿದು ಸಾಲ ತೀರಿಸೋಣ ಎಂದಿದ್ದಾಳೆ.

ಇದರಿಂದ ಕೋಪಿತಗೊಂಡ ಚಂದ್ರಶೇಖರ ರಾತ್ರಿ ಎಗ್ ರೈಸ್ ನಲ್ಲಿ ವಿಷ ಬೆರೆಸಿ ಹತ್ಯೆಗೆ ಸ್ಕೆಚ್ ಹಾಕಿದ್ದಾನೆ.ಘಟನೆ ಬಳಿಕ ಪತ್ನಿ ಮುಂದೆ ಎಗ್ ರೈಸ್ ನಲ್ಲಿ ವಿಷ ಬೆರಿಸಿದ ಬಗ್ಗೆ ಪತಿ ಬಾಯ್ಬಿಟ್ಟಿದ್ದಾನೆ. ವಿಷಯ ತಿಳಿದ ಪತ್ನಿ ಸಾವಿತ್ರಿ ಅರಸನಾಳ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿ ಚಂದ್ರಶೇಖರ್ ಅರಸನಾಳ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
PublicNext

PublicNext

10/06/2022 09:06 am

Cinque Terre

33.78 K

Cinque Terre

3

ಸಂಬಂಧಿತ ಸುದ್ದಿ