ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಮಗ ಮೂಸೆವಾಲಾನನ್ನ ಕೊಂದಿದ್ದರೇ ಗುಂಡು ಹೊಡಿಯಿರಿ !

ಬಟಿಂಡಾ: ಪಂಜಾಬ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಬಟಿಂಡಾದ ಯುವಕನ ಹೆಸರು ಕೇಳಿ ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಈತನ ತಾಯಿ ಈಗೊ ಹೇಳಿಕೊಟ್ಟಿದ್ದು,ತಮ್ಮ ಮಗ ತಪ್ಪು ಮಾಡಿದ್ದರೇ, ಆತನನ್ನ ಗುಂಡಿಕ್ಕಿ ಕೊಂದು ಬಿಡಿ ಅಂತಲೇ ಹೇಳಿದ್ದಾರೆ.

ಹೌದು. ಬಟಿಂಡಾದ ನಿವಾಸಿ ಕೇಶವ್ ಹೆಸರೂ ಮೂಸೆವಾಲಾ ಹತ್ಯೆ ಕೇಸ್‌ ಅಲ್ಲಿ ಕೇಳಿ ಬಂದಿದೆ. ಈಗಾಗಲೇ ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕೇಶವ್ ಹೆಸರನ್ನ ಪೊಲೀಸರು ಬಹಿರಂಗಪಡಿಸುತ್ತಿದ್ದಂತೇ, ಕೇಶವ್ ಕುಟುಂಬ ಆತಂಕಕ್ಕೀಡಾಗಿದ್ದು, ವಯಸ್ಸಾದ ತಾಯಿ ಮತ್ತು ಸಹೋದರಿ ಮಾಧ್ಯಮದ ಮುಂದೆ ಬಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.ಮೂಸೆವಾಲಾ ಹತ್ಯೆಗೂ ತಮ್ಮ ಕೇಶವ್‌ಗೂ ಯಾವುದೇ ಸಂಬಂಧ ಇಲ್ಲವೇ ಇಲ್ಲ ಅಂತಲೂ ಕೇಶವ್ ತಾಯಿ ಹೇಳಿದ್ದಾರೆ.

Edited By :
PublicNext

PublicNext

09/06/2022 03:36 pm

Cinque Terre

25.13 K

Cinque Terre

0

ಸಂಬಂಧಿತ ಸುದ್ದಿ