ಬೆಂಗಳೂರು: ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಶ್ವದ ಉನ್ನತ ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ಗುವಾಹಟಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 41ನೇ ಸ್ಥಾನದಲ್ಲಿದೆ ಎಂದು ಬುಧವಾರ ಬಿಡುಗಡೆಯಾದ ಕ್ಯೂಎಸ್ ವಿಶ್ವ ವಿಶ್ವವಿದ್ಯಾಲಯ ಶ್ರೇಯಾಂಕ ಪಟ್ಟಿಯಲ್ಲಿ ಪ್ರಕಟವಾಗಿದೆ.
ಲಂಡನ್ ಮೂಲದ ಕ್ವಾಕ್ವೆರೆಲ್ಲಿ ಸೈಮಂಡ್ಸ್ (ಕ್ಯೂಎಸ್) ನಡೆಸಿದ ವಿಶ್ಲೇಷಣೆಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ), ಬೆಂಗಳೂರು ಪ್ರತಿ ಬೋಧಕ ವರ್ಗದ (ಸಿಪಿಎಫ್) ಮೆಟ್ರಿಕ್‌ನ ಉಲ್ಲೇಖಗಳಲ್ಲಿ 100ರಲ್ಲಿ 100 ಅಂಕಗಳನ್ನು ಪಡೆದಿದೆ. ಒಟ್ಟಾರೆ ಶ್ರೇಯಾಂಕದಲ್ಲಿ ಭಾರತೀಯ ಮೂರು ಸಂಸ್ಥೆಗಳು ಟಾಪ್ 200ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) 155 ನೇ ಸ್ಥಾನದಲ್ಲಿದ್ದು, ಅಗ್ರಸ್ಥಾನದಲ್ಲಿರುವ ಭಾರತೀಯ ಸಂಸ್ಥೆಯಾಗಿ ಹೊರಹೊಮ್ಮಿದೆ. ನಂತರ ಐಐಟಿ ಬಾಂಬೆ (172), ಐಐಟಿ ದೆಹಲಿ (174), ಐಐಟಿ ಮದ್ರಾಸ್ (250), ಐಐಟಿ ಕಾನ್ಪುರ (264), ಐಐಟಿ ಖರಗ್‌ಪುರ (270), ಐಐಟಿ ರೂರ್ಕಿ (369), ಐಐಟಿ ಗುವಾಹಟಿ (384) ಮತ್ತು ಐಐಟಿ ಇಂದೋರ್ (396) ಸ್ಥಾನದಲ್ಲಿವೆ.
PublicNext
09/06/2022 09:29 am