ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಲ್ಲಿ ದರ್ಶನ್ ಗೌಡ ಅಕ್ರಮ ನಡೆಸಿರೋದು ಎಫ್‌ಎಸ್‌ಎಲ್ ವರದಿಯಲ್ಲಿ ಬಹಿರಂಗವಾಗಿದೆ. ಪರೀಕ್ಷೆಯಲ್ಲಿ ಉತ್ತರವನ್ನು ಬರೆಯದೇ ದರ್ಶನ್ ಗೌಡ ನಾಲ್ಕನೇ ರ‍್ಯಾಂಕ್ ಬಂದಿದ್ದ ಎನ್ನುವುದು ತಿಳಿದು ಬಂದಿದೆ.
ಪರೀಕ್ಷೆ ಬರೆಯುವ ದಿನ ಸಂಪೂರ್ಣ ಗೊತ್ತಿದ್ದ ಕೆಲವು ಉತ್ತರಗಳನ್ನು ಮಾತ್ರ ಬರೆದಿದ್ದ ದರ್ಶನ್ ಉಳಿದ ಜಾಗದಲ್ಲಿ ಖಾಲಿ ಬಿಟ್ಟು ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ. ಈ ಉತ್ತರ ಪತ್ರಿಕೆಯನ್ನು ನೇಮಕಾತಿ ವಿಭಾಗದಲ್ಲೇ ತಿದ್ದಿರೋ ಅನುಮಾನ ಉಂಟಾಗಿದೆ. ಖಾಲಿ ಉತ್ತರ ಪತ್ರಿಕೆ ಕೊಟ್ಟು ಹೋಗಿದ್ದ ದರ್ಶನ್ ಗೌಡ ಒಎಂಆರ್ ಶೀಟ್ ನಂಬರ್ ಪಡೆದು ನಂತರ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುವರ ಜೊತೆಗೆ ಡೀಲ್ ನಡೆಸಿ ಉತ್ತರ ಬರೆಸಿರುವ ಶಂಕೆ ವ್ಯಕ್ತವಾಗಿದೆ.
ಇನ್ನೂ ಪಿಎಸ್‌ಐ ಕೇಸ್ ಹೊರಬರುತ್ತಿದ್ದಂತೆ ದರ್ಶನ್ ಗೌಡ ಸಚಿವ ಅಶ್ವಥ್ ನಾರಯಣ ಮುಖೇನ ಲಕ್ಷ ಲಕ್ಷ ಹಣ ಕೊಟ್ಟು ಕೆಲಸಗಿಟ್ಟಿಸಿಕೊಂಡಿದ್ದಾನೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು. ಸುಮಾರು ಎಂಬತ್ತು ಲಕ್ಷ ಹಣ ನೀಡಿದ್ದ ದರ್ಶನ್ ನೀಡಿದ್ದ ಎಂದು ಆರೋಪ ಕೇಳಿ ಬಂದಿತ್ತು. ನೇಮಕಾತಿ ವಿಭಾಗದಲ್ಲಿ ತಿದ್ದುಪಡಿ ನಂತರ ಓಎಂಆರ್ ಶೀಟ್‌ನಲ್ಲೂ ಕೀ ಅನ್ಸರ್ ನೋಡಿ ಮತ್ತೆ ಕಾರ್ಬನ್ ಕಾಪಿ ತಿದ್ದಿದ್ದ. ಆದರೆ ಈ ಎಫ್‌ಎಸ್‌ಎಲ್‌ನಲ್ಲಿ ಅಸಲಿ ಸತ್ಯ ಬಯಲಾಗಿದ್ದು, ಮುಂದಿನದಿನಗಳಲ್ಲಿ ಈ ಪ್ರಕರಣ ಸಚಿವ ಬುಡಕ್ಕೆ ಅಂಟಿಕೊಳ್ಳುವ ಸಾಧ್ಯತೆಯಿದೆ.
PublicNext
09/06/2022 09:16 am